ದಾವೂದ್ ಸಹಚರನನ್ನು ಬಾರತಕ್ಕೆ ಒಪ್ಪಿಸಲು ಥಾಯ್ ನ್ಯಾಯಾಲಯ ಒಪ್ಪಿಗೆ

ಪಾಕಿಸ್ತಾನದ ಮೇಲೆ ಬಾರತ ಮತ್ತೊಂದು ರಾಜತಾಂತ್ರಿಕ ವಿಜಯ ಸಾಧಿಸಿದೆ.
ಮೊಹಮ್ಮದ್ ಸಲೀಲೀಂ
ಮೊಹಮ್ಮದ್ ಸಲೀಲೀಂ
ಬ್ಯಾಂಕಾಕ್(ಥಾಯ್ಲ್ಯಾಂಡ್): ಪಾಕಿಸ್ತಾನದ ಮೇಲೆ ಬಾರತ ಮತ್ತೊಂದು ರಾಜತಾಂತ್ರಿಕ ವಿಜಯ ಸಾಧಿಸಿದೆ. ದಾವೂದ್ ಇಬ್ರಾಹಿಂನ ಡಿ ಕಂಪನಿಯಲ್ಲಿ ಸಕ್ರಿಯನಾಗಿದ್ದ ಸಯ್ಯದ್ ಮುಝಕ್ಕರ್ ಮುದ್ದಾಸಾರ್ ಹುಸೇನ್,ಪಾಕಿಸ್ತಾನದವನಲ್ಲ. ಆತ ಭಾರತೀಯನೆಂದು ಥಾಯ್ಲ್ಯಾಂಡ್ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.
ಮೊಹಮ್ಮದ್ ಸಲೀಲೀಂ ದಾವೂದ್ ಹಾಗೂ ಛೋಟಾ ಶಕೀಲ್ ಅವರುಗಳೊಂದಿಗೆ ಡಿ-ಕಂಪನಿ ಯಲ್ಲಿ ತೊಡಗಿಸಿಕೊಂಡು ಭೂಗತ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. 
ಈತ ನಕಲಿ ಪಾಕಿಸ್ತಾನಿ ಪಾಸ್ ಪೋರ್ಟ್ ನೊಂದಿಗೆ ಬ್ಯಾಂಕಾಕ್ ಗೆ ಪ್ರವೇಶಿಸಿದ್ದ. ದಾವೂದ್ ನ ಎದುರಾಳಿ ಛೋಟಾ ರಾಜನ್ ನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯಾಗಿರುವ ಈತ 2000 ರಿಂದ ಥಾಯ್ ಜೈಲಿನಲ್ಲಿದ್ದಾನೆ.
ಮೊಹಮ್ಮದ್ ಸಲೀಲೀಂ ತಂದೆಯಾದ ಜಿಂಗ್ರಾ 1993 ರ ಮುಂಬೈ ಸರಣಿ ಸ್ಫೋಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com