ಮಗು ಅಳುತ್ತಿದೆ ಎಂಬ ಕಾರಣ ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದ ಬ್ರಿಟೀಷ್ ಏರ್ ವೇಸ್!

ಮೂರು ವರ್ಷದ ಮಗು ಅಳುತ್ತಿದೆ ಎನ್ನುವ ಕಾರಣ ನೀಡಿ ಬ್ರಿಟಿಷ್ ಏರ್ ವೇಸ್ ಭಾರತಿಯ ಕುಟುಂಬವನ್ನು ವಿಮಾನದಿಂದ ಬಲವಂತವಾಗಿ ಕೆಳಗಿಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಮೂರು ವರ್ಷದ ಮಗು ಅಳುತ್ತಿದೆ ಎನ್ನುವ ಕಾರಣ ನೀಡಿ ಬ್ರಿಟಿಷ್ ಏರ್ ವೇಸ್ ಭಾರತಿಯ ಕುಟುಂಬವನ್ನು ವಿಮಾನದಿಂದ ಬಲವಂತವಾಗಿ ಕೆಳಗಿಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
ಜುಲೈ 23 ರಂದು ಬ್ರಿಟಿಷ್ ಏರ್ ವೇಸ್ ಗೆ ಸೇರಿದ್ದ ವಿಮಾನದಲ್ಲಿ ನಡೆದ ಘಟನೆ ಇದಾಗಿದೆ. ಭಾರತೀಯ ಮೂಲದ ಕುಟುಂಬ ಲಂಡನ್-ಬರ್ಲಿನ್  ನಡುವೆ ಸಂಚರಿಸುವ ಬಿಎ 8495 ವಿಮಾನದಲ್ಲಿ ಪ್ರಯಾಣಿಸುತ್ತಿತ್ತು.
ಸಧ್ಯ ಕುಟುಂಬವು "ವಿಮಾನಯಾನ ಸಂಸ್ಥೆ ನಮಗೆ ಅವಮಾನಿಸಿದೆ ಹಾಗು ಜನಾಂಗೀಯ ನಿಂದನೆ ನಡೆದಿದೆ" ಎಂದು ಆರೋಪಿಸಿ ಕೇಂದ್ರ ವಿಮಾನಯಾನಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದೆ.
ವರದಿ ಪ್ರಕಾರ ಮಗುವು ವಿಮಾನ ಟೇಕ್ ಆಫ್ ಆಗುವಾಗ ಸಮಾಧಾನವಾಗಿತ್ತು. ತಾಯಿ ತನ್ನ ಮಗುವನ್ನು ಸಾಂತ್ವನಗೊಳಿಸಲು ಸಮರ್ಥರಾಗಿದ್ದರು. ಆದರೆ ವಿಮಾನ ಸಿಬ್ಬಂದಿ ಮಗುವಿಗೆ ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಹೇಳಿ ಬೆದರಿಸಿದಾಗ ಮಗು ಮತ್ತಷ್ಟು ಜೋರಾಗಿ ಅಳಲು ಪ್ರಾರಂಭಿಸಿದೆ. ಇದೇ ತಕ್ಷಣ ವಿಮಾನವನ್ನು ರಕ್ಷಣಾ ಟರ್ಮಿನಲ್ ಗೆ ತಂದ ವಿಮಾನ ಸಿಬ್ಬಂದಿ ಮಗುವಿನ ತಂದೆ-ತಾಯಿ ಹಾಗೂ ಕುಟುಂಬದೊಡನೆ ಅವರ ಹಿಂದೆ ಕುಳಿತಿದ್ದ ಭಾರತೀಯರನ್ನೂ ಕೆಳಗಿಳಿಸಿದೆ.
"ಒಬ್ಬ ಪುರುಷ ಸಿಬ್ಬಂದಿ ನಮ್ಮ ಹತ್ತಿರ ಬಂದು ಮಗುವಿಗೆ ಸೀಟ್ ಬೆಲ್ಟ್ ಹಾಕುವಂತೆ ಗಟ್ಟಿಯಾಗಿ ಗದರಿದ್ದಾರೆ.ನನ್ನ ಮಗನು ಭಯಭೀತನಾಗಿಅಳುವುದಕ್ಕೆ ಪ್ರಾರಂಭಿಸಿದೆ. ಆ ವೇಳೆ ಮಗುವಿನ ಅಳು ನಿಲ್ಲುವಂತೆ ಮಾಡಲು ನಮ್ಮ ಹಿಂದೆ ಕುಳಿತಿದ್ದ ಭಾರತೀಯ ಕುಟುಂಬವು ಮಗುವಿಗೆ ಕೆಲ ಬಿಸ್ಕೇಟ್ ಗಳನ್ನು ನೀಡಿದೆ. ಬಳಿಕ ನನ್ನ ಪತ್ನಿ ಮಗುವನ್ನು ಅದರ ಆಸನದಲ್ಲಿ ಕೂರಿಸಿದ್ದಲ್ಲದೆ ಅಳುತ್ತಿದ್ದಾಗಲೇ ಸೀಟ್ ಬೆಲ್ಟ್ ಹಾಕಿದ್ದಾಳೆ" ಪತ್ರದಲ್ಲಿ ವಿವರಿಸಲಾಗಿದೆ.
"ವಿಮಾನದ ಸಿಬ್ಬಂದಿ ಹಾಗೂ ಸದಸ್ಯರು ಜನಾಂಗೀಯ ಟೀಕೆಗಳನ್ನು ಮಾಡಿದ್ದಾರೆ.  ಭಾರತೀಯರ ಬಗ್ಗೆ "ಕೆಟ್ಟ" ಪದಗಳನ್ನು ಪ್ರಯೋಗಿಸಿದ್ದಾರೆ. ಭಾರತೀಯರು ’ಬ್ಲಡಿ ಇಂಡಿಯನ್ಸ್’ ಎಂದೂ ದೂಷಿಸಿದ್ದಾರೆ. ಈ ಕುರಿತಂತೆ ತನಿಖೆ ನಡೆಸಿ ಸೂಕ್ತ ಹಾಗೂ ಕರಾರುವಕ್ಕಾದ ಕ್ರಮ ಜರುಗಿಸುವಂತೆ ಕೋರುತ್ತೇನೆ" ಅವರು ಹೇಳಿದ್ದಾರೆ.
1984ನೇ ಬ್ಯಾಚ್ ಭಾರತೀಯ ಇಂಜಿನಿಯರಿಂಗ್ ಸರ್ಕಾರಿ ಅಧಿಕಾರಿ ಹಾಗೂ ಸಾರಿಗೆ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಕುಟುಂಬದ ಮೇಲೆ ವಿಮಾನಯಾನ ಸಂಸ್ಥೆ ಜನಾಂಗೀಯ ನಿಂದನೆ ನಡೆಸಿದೆ ಎಂದು ಹೇಳಲಾಗಿದೆ.
ಆದರೆ ಇದೇ ವೇಳೆ ವಿಮಾನ ಯಾನ ಸಂಸ್ಥೆ ಮಾತ್ರ ತನ್ನ ವಿರುದ್ಧದ ಆರೋಪ ತಳ್ಳಿ ಹಾಕಿದ್ದು "ನಾವು ಗ್ರಾಹಕರೊಡನೆ ಉತ್ತಮ ಸಂಪರ್ಕ ಹೊಂದಿದ್ದೇವೆ.ಯಾವುದೇ ತಾರತಮ್ಯ ನಡೆಸಿಲ್ಲ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com