ಪಾಕ್ ಸ್ವಾತಂತ್ರ್ಯದಿನದ ಪರೇಡ್‍ನಲ್ಲಿ ಭಾರತದ ಹಾಡನ್ನು ಹಾಡಿ ಟೀಕೆಗೆ ಗುರಿಯಾದ ಗಾಯಕ ಅತಿಫ್!

ನ್ಯೂಯಾರ್ಕ್ ನಲ್ಲಿ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನದ ಪರೇಡ್ ನಲ್ಲಿ ಪಾಕ್ ಗಾಯಕ ಅತಿಫ್ ಅಸ್ಲಾಂ ಭಾರತದ ಹಾಡೊಂದನ್ನು ಹಾಡಿ ಇದೀಗ ಟೀಕೆಗೆ ಗುರಿಯಾಗಿದ್ದಾರೆ...
ಅತಿಫ್ ಅಸ್ಲಾಂ
ಅತಿಫ್ ಅಸ್ಲಾಂ
ನ್ಯೂಯಾರ್ಕ್ ನಲ್ಲಿ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನದ ಪರೇಡ್ ನಲ್ಲಿ ಪಾಕ್ ಗಾಯಕ ಅತಿಫ್ ಅಸ್ಲಾಂ ಭಾರತದ ಹಾಡೊಂದನ್ನು ಹಾಡಿ ಇದೀಗ ಟೀಕೆಗೆ ಗುರಿಯಾಗಿದ್ದಾರೆ. 
ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತದ ಹಾಡುನ್ನು ಹಾಡಿರುವ ಅತೀಫ್ ಅಸ್ಲಾಂಗೆ ತಮ್ಮ ನಾಡಿನ ಬಗ್ಗೆ ದೇಶಪ್ರೇಮ ಇದೆಯೇ ಎಂದು ಟ್ವೀಟರಿಗರು ಪ್ರಶ್ನಿಸಿದ್ದಾರೆ. 
ಅತೀಫ್ ಅಸ್ಲಾಂನನ್ನು ನಾನು ಗೌರವಿಸುವುದಿಲ್ಲ, ಅತೀಫ್ ನನ್ನು ಬಹಿಷ್ಕರಿಸಿ ಎಂದು ಟ್ವೀಟರಿಗರು ಅತೀಫ್ ವಿರುದ್ಧ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. 
ಇದೇ ವೇಳೆ, ಅತೀಫ್ ಅಸ್ಲಾಂ ಕಾರ್ಯವನ್ನು ಪಾಕ್ ಗಾಯಕ ಶಫ್ಖತ್ ಅಮನಾತ್ ಅಲಿ ಬೆಂಬಲಿಸಿದ್ದಾರೆ. ಸಂಗೀತಕ್ಕೆ ಭಾರತ ಅಥವಾ ಪಾಕಿಸ್ತಾನ ಅಂತ ಗಡಿ ಇರುವುದಿಲ್ಲ. ಗಾಯಕರು ತಮ್ಮ ಹಾಡುಗಳಿಗೆ ಸಮಾನಾರ್ಥಕರಾಗಿದ್ದಾರೆ. ಇನ್ನು ಪ್ರತಿ ದೇಶದ ಅಭಿಮಾನಿಗಳು ಸಮಾನವಾಗಿ ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ. 
2009ರಲ್ಲಿ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಅಭಿನಯದ ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಚಿತ್ರದ ತೆರೆ ಹೋನೆ ಲಕಾ ಹೂಂ ಹಾಡನ್ನು ಹಾಡಿ ಅತೀಫ್ ಅಸ್ಲಾಂ ಜನ ಮನ್ನಣೆಯನ್ನು ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com