ಫ್ರೆಡರಿಕ್ಷನ್(ಕೆನಡಾ): ಪೂರ್ವ ಕೆನಡಾದಲ್ಲಿ ನಡೆದ ಶೂಟಔಟ್ ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತಿಬ್ಬರು ನಾಗರಿಕರು ಹತರಾಗಿದ್ದಾರೆ. ಘಟನೆಗೆ ಸಂಬಂಧಿಸಿ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸರಣಿ ಶೂಟೌಟ್ ಘಟನೆ 58,000 ಜನರಿರುವ ಪುಟ್ಟ ನಗರವನ್ನು ದಿಗ್ಭ್ರಮೆಗೊಳಿಸಿದೆ. ಫ್ರೆಡ್ರಿಕ್ಟನ್ ನಗರದ ಪೋಲೀಸರು ಸಾರ್ವಜನಿಕರು ಮನೆಯಲ್ಲೇ ಉಳಿಯಬೇಕು, ಹೆಚ್ಚು ಹೊತ್ತು ಹೊರಗಿರುವುದು ಸುರಕ್ಷಿತವಲ್ಲ ಎಂದು ಸೂಚನೆ ನಿಡಿದ್ದಾರೆ.\
ಅಲ್ಲದೆ ಸಾಮಾಜಿಕ ಮಾಧ್ಯಮ ಬಳಕೆದಾರರೊಂದಿಗೆ ಪೊಲೀಸರು ಮನವಿ ಮಾಡಿದ್ದು ವದಂತಿಗಳನ್ನು ಹರಡಬಾರದೆಂದು, ಪೋಲೀಸ್ ತನಿಖೆಗೆ ಸಹಕರಿಸಬೇಕೆಂದು ಕೋರಿದ್ದಾರೆ.
ಕೆನಡಾದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗಿಂತ ಹೆಚ್ಚು ಕಟ್ಟುನಿಟ್ಟಾಗಿದೆ. ಆದರೆ ಇತ್ತೀಚೆಗೆ ಅಕ್ರಮ ಶಸ್ತ್ರಾಸ್ತ್ರಗಳ ಪ್ರಸರಣದಿಂದಾಗಿ ಶೂಟಔಟ್ ಪ್ರಕರಣಗಳು ಹೆಚ್ಚುತ್ತಿದೆ.
ಕೆನಡಾ ಪ್ರಧಾನಿ ಸಂತಾಪ
ಫ್ರೆಡ್ರಿಕ್ಟನ್ ನಲ್ಲಿ ಸಂಭವಿಸಿದ ಸರಣಿ ಶೂಟಔಟ್ ಪ್ರಕರಣದ ಸಂಬಂಧ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಸಂತಾಪ ಸೂಚಿಸಿದ್ದಾರೆ. "ಫ್ರೆಡ್ರಿಕ್ಟನ್ ಘಟನೆಯು ಒಂದು ಭೀಕರ ಸುದ್ದಿಯಾಗಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.