ಕಾಬೂಲ್ ನಲ್ಲಿ ಆತ್ಮಾಹುತಿ ದಾಳಿ: ಕನಿಷ್ಟ 25 ಸಾವು, 35 ಮಂದಿಗೆ ಗಾಯ

ಶಂಕಿತ ಭಯೋತ್ಪಾದನಾ ಬಾಂಬ್ ದಾಳಿಯಲ್ಲಿ ಕನಿಷ್ಠ 25 ಮಂದಿ ಮೃತಪಟ್ಟು 35 ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾಬೂಲ್(ಅಫ್ಘಾನಿಸ್ಥಾನ): ಶಂಕಿತ ಭಯೋತ್ಪಾದನಾ ಬಾಂಬ್ ದಾಳಿಯಲ್ಲಿ ಕನಿಷ್ಠ 25 ಮಂದಿ ಮೃತಪಟ್ಟು 35 ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ನಲ್ಲಿ ನಡೆದಿದೆ.
ಕಾಬೂಲ್ ನ ಶಿಕ್ಷಣ ಸಂಸ್ಥೆಯ ಎದುರಿಗೆ ಆತ್ಮಾಹುತಿ ಬಾಬರ್ ಒಬ್ಬನು ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ.ಕಾಬೂಲ್ ನ ಪಶ್ಚಿಮ ಭಾಗದ  ದಾತ್-ಎ-ಬಾರ್ಚ್ ಎನ್ನುವಲ್ಲಿ ಈ ಭೀಕರ ಘಟನೆ ನಡೆದಿದೆ.
ತರಗತಿಗಳು ನಡೆಯುತ್ತಿದ್ದ ವೇಳೆಯಲ್ಲೇ ಈ ಬಾಬ್ ದಾಳಿ ನಡೆದಿದೆ. ಸಧ್ಯ ಈ ದಾಳಿಯ ಹೊಣೆಯನ್ನು ಯಾವ ಭಯೋತ್ಪಾದಕ ಸಂಘಟನೆಗಳೂ ಹೊತ್ತುಕೊಂಡಿಲ್ಲ.
ಘಟನಾ ಸ್ಥಳವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಸ್ಟ್ 10ರಿಂದ ಈಚೆಗೆ ನೂರಾರು ತಾಲಿಬಾನ್ ಉಗ್ರರು ಅಫ್ಘಾನಿಸ್ಥಾನದ ಘಜನಿ ನಗರದ ಮೇಲೆ ನಿರಂತರ ದಾಳಿ ನಡೆಸಿದ್ದು ದಾಳಿಯಲ್ಲಿ ಇದುವರೆಗೆ 100 ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 133 ಮಂದಿ ಗಾಯಗೊಂಡಿದ್ದಾರೆ.
ರಾಜಕೀಯ ಸಂಕ್ಷೋಭೆಯಲ್ಲಿರುವ ಅಫ್ಘಾನಿಸ್ಥಾನಕ್ಕೆ ತಾಲಿಬಾನ್  ಹೋರಾಟವು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com