ಸೌದಿ ಅರಬೀಯಾಕ್ಕೆ ತೆರಳಿದ ಸುಮಾರು 1.28 ಲಕ್ಷ ಭಾರತೀಯ ಹಜ್ ಯಾತ್ರಾರ್ಥಿಗಳು

ಈ ವರ್ಷ ದಾಖಲೆಯ ಸುಮಾರು 1.28 ಲಕ್ಷ ಭಾರತೀಯ ಯಾತ್ರಾರ್ಥಿಗಳು ಸೌದಿ ಅರಬೀಯಾಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೆದ್ಹಾ: ಈ ವರ್ಷ ದಾಖಲೆಯ   ಸುಮಾರು 1.28 ಲಕ್ಷ ಭಾರತೀಯ ಯಾತ್ರಾರ್ಥಿಗಳು ಸೌದಿ ಅರಬೀಯಾಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಹಜ್ ಸಮಿತಿಯಿಂದ ತೆರಳಿದ  1 ಕೋಟಿ 28 ಲಕ್ಷದ 702 ಭಾರತೀಯ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ಸೌಕರ್ಯ ಒದಗಿಸಲಾಗಿದೆ. ಸುಮಾರು 466ಕ್ಕೂ ಹೆಚ್ಚು ವಿಮಾನಗಳ ಮೂಲಕ ಭಾರತೀಯ ಯಾತ್ರಾರ್ಥಿಗಳನ್ನು ವಾರ್ಷಿಕ ಯಾತ್ರೆಗೆ ಕೊಂಡೊಯ್ಯಲಾಗುತ್ತದೆ, ಶುಕ್ರವಾರ ಬೆಳಗ್ಗೆ ಕೊನೆಯ ವಿಮಾನ ಬಂದಿಳಿತು ಎಂದು ಜೆದ್ಹಾದ ಭಾರತೀಯ ರಾಯಬಾರಿ ಕಚೇರಿ ಮೂಲಗಳಿಂದ ತಿಳಿದುಬಂದಿದೆ.

ಈ ವರ್ಷ ದಾಖಲೆಯ 1 ಕೋಟಿ 75 ಲಕ್ಷ 025 ಸಾವಿರದ ಮುಸ್ಲಿಂ ಭಾರತದಿಂದ ಹಜ್ ಯಾತ್ರೆ ಕೈಗೊಂಡಿದ್ದಾರೆ. ಈ ಪೈಕಿ ಶೇ, 47 ರಷ್ಟು ಮಂದಿ ಮಹಿಳೆಯರಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಮಹಿಳೆಯರು ಭಾರತದಿಂದ ಹಜ್ ಯಾತ್ರೆಗೆ ತೆರಳಿದ್ದಾರೆ.

ಕಳೆದ ವರ್ಷದವರೆಗೂ ಸೌದಿ ಅರಬೀಯಾಕ್ಕೆ ತೆರಳುವ ಮಹಿಳೆಯರೊಂದಿಗೆ ಪತಿ  ಇರಬೇಕೆಂಬ ನಿಯಮ ಕಡ್ಡಾಯವಾಗಿತ್ತು. ಆದರೆ ಈ ಬಾರಿ ಪುರುಷರ ಸಂಗಡ ಇಲ್ಲದಿದ್ದರೂ ಭಾರತೀಯ  ಮಹಿಳೆಯರು ಹಜ್ ಯಾತ್ರೆಗೆ ತೆರಳಿದ್ದಾರೆ. ಯಾವುದೇ  ಸಬ್ಸಿಡಿ ಇಲ್ಲದೆ ಇದೇ ಮೊದಲ ಬಾರಿಗೆ ಯಾತ್ರಾರ್ಥಿಗಳು ಹಜ್ ಯಾತ್ರೆ ಕೈಗೊಂಡಿದ್ದಾರೆ

ಇಸ್ಲಾಂರ ಪವಿತ್ರ ನಂಬಿಕೆಗಳಲ್ಲಿ ಹಜ್ ಯಾತ್ರೆಯೂ ಒಂದಾಗಿದ್ದು, ಸುಮಾರು 1.6 ಮಿಲಿಯನ್ ಮುಸ್ಲಿಂರು ಬೇರೆ ಬೇರೆ ದೇಶಗಳಿಂದ ಸೌದಿ ಅರಬೀಯಾಕ್ಕೆ  ಭೇಟಿ ನೀಡುತ್ತಾರೆ. ಹೀಗೆ ಬಂದವರು ಮೆಕ್ಕಾದಲ್ಲಿನ ಇಸ್ಲಾಂ ಪವಿತ್ರ ಕ್ಷೇತ್ರ ಕಾಬಾ ಮಸೀದಿಯಲ್ಲಿ ಸೇರುತ್ತಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com