ಕಾಂಬೊಡಿಯಾ ವಿದೇಶಾಂಗ ಸಚಿವರೊಂದಿಗೆ ಸುಷ್ಮಾ ಸ್ವರಾಜ್ ದ್ವಿಪಕ್ಷೀಯ ಮಾತುಕತೆ

ಕಾಂಬೊಡಿಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹವರ್ತಿ ಪ್ರಕ್ ಸೊಕೊನ್ ಅವರೊಂದಿಗೆ ದ್ವೀಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆಸಿದರು.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್

ನೋಮ್ ಪೆನ್ : ಕಾಂಬೊಡಿಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಸಹವರ್ತಿ ಸಚಿವ  ಪ್ರಕ್ ಸೊಕೊನ್ ಅವರೊಂದಿಗೆ  ದ್ವೀಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆಸಿದರು.

ಎರಡು ದಿನಗಳ ಕಾಲ ಆಗ್ನೇಯ ಏಷ್ಯಾ ರಾಷ್ಟ್ರಗಳ ಭೇಟಿಯಲ್ಲಿರುವ ಸುಷ್ಮಾ ಸ್ವರಾಜ್, ಕಾಂಬೊಡಿಯಾ ಪ್ರಧಾನಮಂತ್ರಿ ಹುನ್ ಸೇನ್ ಹಾಗೂ ಅಧ್ಯಕ್ಷ ಸೆನೆಟ್ ಸೆ ಚ್ಯೂಟ್ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ.

ವಿಯಟ್ನಾಂ ರಾಜಧಾನಿ ಹನೊಯ್ ನಲ್ಲಿ ಸುಷ್ಮಾ ಸ್ವರಾಜ್ ಅಧ್ಯಕ್ಷತೆಯಲ್ಲಿ ನಡೆದ 16 ನೇ  ಜಂಟಿ ಆಯೋಗದಲ್ಲಿ ಭಾರತ ಮತ್ತು ವಿಯಟ್ನಾಂ ನಡುವಣ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ದ್ವೀಪಕ್ಷೀಯ ಬಾಂಧವ್ಯ ವೃದ್ದಿ ಹಿನ್ನೆಲೆಯಲ್ಲಿ ಬಾಂಗ್ಲಾದೇಶ, ಜಪಾನ್, ಮತ್ತು ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳ  ನಿಯೋಗವನ್ನು ಸುಷ್ಮಾ ಸ್ವರಾಜ್ ಭೇಟಿ ಮಾಡಲಿದ್ದಾರೆ.

 ಸೋಮವಾರ ಮೂರನೇ ಭಾರತೀಯ ಸಾಗರೋತ್ತರ ಶೃಂಗಸಭೆ ಉದ್ಘಾಟಿಸಿದ ಸುಷ್ಮಾ ಸ್ವರಾಜ್,  ಮುಕ್ತ ಮತ್ತು ಪಾರದರ್ಶಕ ಇಂಡೋ ಫೆಸಿಪಿಕ್ ವಲಯಕ್ಕಾಗಿ ಭಾರತ  ಪ್ರಮುಖ ಘಟಕವಾಗಲಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com