ತಮಗಿರುವ ಸೇನೆಯೊಂದಿಗಿನ ಉತ್ತಮ ಬಾಂಧ್ಯದಿಂದಾಗಿ ಶಿರೀನ್ ಮಝಾರಿ ಪಾಕಿಸ್ತಾನದ ರಕ್ಷಣಾ ಸಚಿವರಾಗುತ್ತಾರೆ ಎಂಬ ಊಹಾಪೋಹಗಳೂ ಇತ್ತು. ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶಿರೀನ್ ಮಝಾರಿ, ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳುವುದಕ್ಕೆ ತಾವು ದೀರ್ಘಕಾಲದಿಂದ ಪ್ರಸ್ತಾವನೆಯೊಂದಕ್ಕೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುತ್ತಿದ್ದು, ಈಗ ಅದು ಪೂರ್ಣಗೊಂಡಿದೆ, ಈ ಪ್ರಸ್ತಾವನೆಯನ್ನು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಸಚಿವ ಸಂಪುಟದ ಎದುರು ಮಂಡಿಸಲಾಗುವುದು, ಒಪ್ಪಿಗೆ ದೊರೆತರೆ ಪ್ರಸ್ತಾವನೆಯೊಂದಿಗೆ ಮುಂದುವರೆಯೋಣ ಎಂದು ಹೇಳಿದ್ದಾರೆ.