ವಿಶ್ವದಲ್ಲಿ ಇದೇ ಮೊದಲು: ಮೃತ ಮಹಿಳೆಯ ಗರ್ಭಾಶಯ ಕಸಿ ಮೂಲಕ ಆರೋಗ್ಯವಂತ ಮಗು ಜನನ!

ಮೃತಪಟ್ಟವರ ದೇಹದ ಗರ್ಭಾಶಯವನ್ನು ಕಸಿ ಮಾಡಿದ ಮಹಿಳೆಯೊಬ್ಬರು ಆರೋಗ್ಯವಂತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪ್ಯಾರಿಸ್: ಮೃತ ಮಹಿಳೆಯ ಗರ್ಭವನ್ನು ಕಸಿ ಮಾಡಿದ ಮಹಿಳೆಯೊಬ್ಬರು ಆರೋಗ್ಯವಂತ ಶಿಶುವಿಗೆ ಜನ್ಮ ನೀಡಿದ ವೈದ್ಯಕೀಯ ಲೋಕದಲ್ಲಿ ವಿಸ್ಮಯ ಘಟನೆ ನಡೆದಿದೆ.

ಮೃತ ಮಹಿಳೆಯ ದೇಹದಿಂದ ಮತ್ತೊಬ್ಬ ಮಹಿಳೆಗೆ ಎರಡು ವರ್ಷಗಳ ಹಿಂದೆ ಬ್ರೆಜಿಲ್ ನಲ್ಲಿ ಗರ್ಭಾಶಯ ಕಸಿ ಮಾಡಲಾಗಿತ್ತು. ಈ ರೀತಿ ಗರ್ಭಾಶಯ ಕಸಿ ಮಾಡಿಕೊಂಡಿರುವುದರಿಂದ ಗರ್ಭಕೋಶದ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಮಕ್ಕಳಾಗದ ಸಾವಿರಾರು ಮಹಿಳೆಯರಿಗೆ ಗರ್ಭದಾನ ಮಾಡಿ ಶಿಶು ಜನಿಸಬಹುದು ಎಂಬ ಆಶಾಕಿರಣವನ್ನು ಮೂಡಿಸಿದೆ ಈ ಅಧ್ಯಯನ. ದ ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆಯಲ್ಲಿ ಇದು ಪ್ರಕಟವಾಗಿದೆ.

ಎರಡು ವರ್ಷಗಳ ಹಿಂದೆ ಅಂದರೆ 2016ರ ಸೆಪ್ಟೆಂಬರ್ ನಲ್ಲಿ ಸಾವ್ ಪಾಲೊ ಎಂಬಲ್ಲಿ ಹೆಣ್ಣು ಮಗು ಜನಿಸಿದೆ. ಇಲ್ಲಿಯವರೆಗೆ ಗರ್ಭಾಶಯದ ಬಂಜೆತನಕ್ಕೆ ಬಾಡಿಗೆ ತಾಯ್ತನವೊಂದೆ ಮಹಿಳೆಗೆ ಆಯ್ಕೆಯಾಗಿತ್ತು. 2013ರಲ್ಲಿ ಜೀವಂತ ದಾನಿಯಿಂದ ಸ್ವೀಡನ್ ನಲ್ಲಿ ಗರ್ಭಾಶಯ ಕಸಿ ಮಾಡಿಕೊಂಡು ಮಗು ಜನಿಸಿತ್ತು. ನಂತರ ಇಂತಹ 10 ಶಿಶುಗಳು ಜನಿಸಿದ್ದವು.

ಗರ್ಭಾಶಯ ದಾನಿಗಳ ಸಂಖ್ಯೆಗೆ ಬೇಡಿಕೆ ಹೆಚ್ಚಾಗಿ ಬರುತ್ತಿದ್ದು, ದಾನಿಗಳು ಸಿಗುವುದು ಕಡಿಮೆ. ಹೀಗಾಗಿ ವೈದ್ಯರುಗಳು ಮೃತ ಮಹಿಳೆಯ ಗರ್ಭಾಶಯ ಕಸಿ ಮಾಡಲು ಸಾಧ್ಯವಿದೆಯೇ ಎಂದು ಅಧ್ಯಯನ ನಡೆಸಿದರು. ಅಮೆರಿಕಾ, ಝೆಕ್ ಗಣರಾಜ್ಯ,ಟರ್ಕಿ ಸೇರಿ 10 ಪ್ರಯತ್ನಗಳು ನಡೆದವು. ಶೇಕಡಾ 10ರಿಂದ 15ರಷ್ಟು ದಂಪತಿಗೆ ಇದರಿಂದ ಪರಿಣಾಮ ಬೀರುತ್ತದೆ.

ಮೃತ ಮಹಿಳೆಯರ ಗರ್ಭಾಶಯ ದಾನ ಮಾಡುವವರ ಸಂಖ್ಯೆ ಜೀವಂತ ಇರುವವರಿಗಿಂತ ಜಾಸ್ತಿಯಾಗುತ್ತಿದೆ. ಇದು ಇನ್ನಷ್ಟು ಪ್ರಚಾರವಾಗಬೇಕಿದೆ ಎಂದು ಸಾವ್ ಪೌಲೊ ವಿಶ್ವವಿದ್ಯಾಲಯದ ತಾಂತ್ರಿಕ ವಿಶ್ವವಿದ್ಯಾಲಯದ ವೈದ್ಯ ದಾನಿ ಎಝ್ಸೆನ್ ಬರ್ಗ್ ಹೇಳುತ್ತಾರೆ.

ಮಹಿಳೆ 45 ವರ್ಷದಲ್ಲಿ ಪಾರ್ಶ್ವವಾಯುವಿನಿಂದ ಮೃತಪಟ್ಟರು. ಅವರ ಗರ್ಭಾಶಯ ತೆಗೆದು ಸುಮಾರು 10 ಗಂಟೆಗಳ ಕಾಲ ಸರ್ಜರಿ ಮಾಡಿ ಗರ್ಭದಾನ ಮಾಡಲಾಯಿತು. ಜೀವಂತ ಮಹಿಳೆಯ ದೇಹಕ್ಕೆ ಗರ್ಭಾಶಯ ಹೊಂದಿಕೆಯಾಗಲು 5 ವಿವಿಧ ಔಷಧಗಳು, ಆಂಟಿಮೈಕ್ರೊಬಿಯಲ್ಸ್, ರಕ್ತ ಹೆಪ್ಪುಗಟ್ಟಿಸುವ ಚಿಕಿತ್ಸೆಗಳು ಮತ್ತು ಆಸ್ಪಿರಿನ್ ಕೂಡ ನೀಡಲಾಯಿತು. ಚಿಕಿತ್ಸೆ ನಡೆದು 5 ತಿಂಗಳು ಕಳೆದ ನಂತರ ಯಶಸ್ವಿಯಾಗುತ್ತಿರುವುದು ಕಂಡು ಅಲ್ಟ್ರಾಸೌಂಡ್ ಸ್ಕಾನ್ ಸಹಜವಾಗಿರುವುದು ಕಂಡು ವೈದ್ಯರು ಹಾಗೆಯೇ ಬಿಟ್ಟರು.

ಏಳು ತಿಂಗಳ ನಂತರ ಫಲಭರಿತ ಎಗ್ಸ್ (fertilised eggs) ನ್ನು ಮಹಿಳೆಯ ಗರ್ಭದಲ್ಲಿ ಕಸಿ ಮಾಡಲಾಯಿತು. ಹತ್ತು ದಿನಗಳಲ್ಲಿ ಆಕೆ ಗರ್ಭವತಿಯಾಗಿದ್ದಳು.36 ವಾರಗಳ ನಂತರ ಎರಡೂವರೆ ಕೆ ಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com