ವನೆಸ್ಸಾ ಪೊನ್ಸ್ ಡೆ ಲಿಯಾನ್ , ಮಾನುಸಿ ಚಿಲ್ಲರ್
ವಿದೇಶ
ಮೆಕ್ಸಿಕೊ'ದ ವನೆಸ್ಸಾ ಪೊನ್ಸ್ ಡೆ ಲಿಯಾನ್ ಮುಡಿಗೆ 2018 ವಿಶ್ವ ಸುಂದರಿ ಕಿರೀಟ
ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡೆ ಲಿಯಾನ್ ಈ ಬಾರಿಯ ಪ್ರತಿಷ್ಠಿತ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಸ್ಯಾನ್ ಸಿಟಿ ಅರೆನಾ: ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡೆ ಲಿಯಾನ್ ಈ ಬಾರಿಯ ಪ್ರತಿಷ್ಠಿತ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿ ಪಡೆದಿದ್ದ ಭಾರತದ ಮಾನುಷಿ ಚಿಲ್ಲರ್, ವನೆಸ್ಸಾ ಪೊನ್ಸ್ ಡೆ ಲಿಯಾನ್ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು.
ಮೊದಲ ರನ್ನರ್ ಆಫ್ ಪ್ರಶಸ್ತಿ ಥೈಲ್ಯಾಂಡ್ ಪ್ರತಿನಿಧಿ ಪಾಲಾಯಿತು. ಫೆಮಿನಾ ಮಿಸ್ ಇಂಡಿಯಾ ಅನುಕೃತಿ ವಾಸ್ ಅಗ್ರರ 12ರ ಸುತ್ತಿನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಪ್ರಶಸ್ತಿ ಜಯಿಸಿದ ಬಳಿಕ ಮಾತನಾಡಿದ ವನೆಸ್ಸಾ, ವಿಶ್ವ ಸುಂದರಿ ಪ್ರಶಸ್ತಿ ಸಿಕ್ಕಿರುವುದಕ್ಕೆ ನಂಬುವುದಕ್ಕೆ ಆಗುತ್ತಿಲ್ಲ. ಪ್ರಶಸ್ತಿಗಾಗಿ ಸ್ಪರ್ಧಿಸಿದ್ದ ಎಲ್ಲರೂ ಆರ್ಹರಾಗಿದ್ದರೂ ಹೆಚ್ಚಾಗಿ ಶ್ರಮ ಪಟ್ಟಿದ್ದರಿಂದ ಈ ಬಾರಿ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದು, ಎಲ್ಲರಿಗೂ ಕೃತಜ್ಞನೆ ಸಲ್ಲಿಸುವುದಾಗಿ ಹೇಳಿದರು
ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಕಿರೀಟವನ್ನು 26 ವರ್ಷದ ಚೆಲುವೆ ವನೆಸ್ಸಾ ಪೊನ್ಸ್ ಡೆ ಲಿಯಾನ್ ತಲೆಗೆ ತೊಡಿಸಿದಾಗ ಸಂತೋಷದಲ್ಲಿ ತೇಲಾಡಿದ ಲಿಯಾನ್, ಭಾರತೀಯ ಸಂಪ್ರದಾಯದಂತೆ ನಮಸ್ತೆ ಎಂದು ಹೇಳಿದರು. ನಂತರ ಮುಗಿಲು ಮುಟ್ಟಿದ ಹರ್ಷೋದ್ಘಾರ ಹಾಗೂ ಸಹ ಸ್ಪರ್ಧಿಗಳ ನೃತ್ಯದೊಂದಿಗೆ ಆಕೆ ಹೊಸ ಕಿರೀಟದೊಂದಿಗೆ ಬ್ಯೂಟಿ ಕ್ವೀನ್ ಆಗಿ ವೇದಿಕೆ ಮೇಲೆ ವಾಕ್ ಮಾಡಿದರು.
ಇಂಟರ್ ನ್ಯಾಷನಲ್ ಬ್ಯೂಸಿನೆಸ್ ನಲ್ಲಿ ಪದವಿ ಪೂರೈಸಿರುವ ವನೆಸ್ಸಾ, ಪ್ರಸ್ತುತ ಹೆಣ್ಣು ಮಕ್ಕಳು ಹಾಗೂ ಸ್ವಯಂ ಸೇವಕರ ಪುನರ್ವಸತಿ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಡಲೆ ಹಾಗೂ ನಿರೂಪಕಿಯಾಗಿ ರಾಷ್ಟ್ರೀಯ ಯುವ ಸಂಸ್ಥೆಯ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ.
ವಾಲಿಬಾಲ್, ಚಿತ್ರಕಲೆ ಮತ್ತಿತರ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ವನೆಸ್ಸಾ, ಬಯಲು ನೀರಿನಲ್ಲಿ ಸ್ಕೂಬಾ ಡೈವರ್ ಆಗಿ ಕೂಡಾ ಆರ್ಹತೆ ಹೊಂದಿದ್ದಾರೆ ಎಂದು ವಿಶ್ವ ಸುಂದರಿ ವೆಬ್ ಸೈಟ್ ನಲ್ಲಿ ಹೇಳಲಾಗಿದೆ.
ಈ ವರ್ಷ ಒಟ್ಟಾರೇ 118 ಮಂದಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮಾನುಷಿ ಚಿಲ್ಲರ್ ನಂತರ ಅನುಕೃತಿ ವಿಶ್ವ ಸುಂದರಿಯಾಗಲಿದ್ದಾರೆ ಎಂಬುದು ಬಹುತೇಕ ಭಾರತೀಯರ ನಂಬಿಕೆಯಾಗಿತ್ತು. ಆದರೆ, ಮೊದಲ 30 ರಲ್ಲಿ ಸ್ಥಾನ ಪಡೆದ್ದರೂ ನಂತರ 12 ರಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ