ಜಗತ್ತಿನ ಅರ್ಧಕ್ಕೂ ಹೆಚ್ಚು ಜನಸಂಖ್ಯೆಯಿಂದ ಇಂಟರ್ ನೆಟ್ ಬಳಕೆ!

ಇಂದಿನ ದಿನಗಳಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದೇ ಇರುವ ವ್ಯಕ್ತಿಗಳು ಇರುವುದು ಅಪರೂಪ. ಬಹುತೇಕ ಎಲ್ಲರೂ ಸಹ ಇಂಟರ್ ನೆಟ್ ನೊಂದಿಗೆ ಸಂಪರ್ಕ ಹೊಂದಿರುತ್ತಾರೆ.
ಜಗತ್ತಿನ ಅರ್ಧಕ್ಕೂ ಹೆಚ್ಚು ಜನಸಂಖ್ಯೆಯಿಂದ ಇಂಟರ್ ನೆಟ್ ಬಳಕೆ!
ಜಗತ್ತಿನ ಅರ್ಧಕ್ಕೂ ಹೆಚ್ಚು ಜನಸಂಖ್ಯೆಯಿಂದ ಇಂಟರ್ ನೆಟ್ ಬಳಕೆ!
ಜನೀವಾ: ಇಂದಿನ ದಿನಗಳಲ್ಲಿ ಇಂಟರ್ನೆಟ್  ಸಂಪರ್ಕ ಇಲ್ಲದೇ ಇರುವ ವ್ಯಕ್ತಿಗಳು ಇರುವುದು ಅಪರೂಪ. ಬಹುತೇಕ ಎಲ್ಲರೂ ಸಹ ಇಂಟರ್ ನೆಟ್ ನೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಈ ಬೆಳವಣಿಗೆ ತೀವ್ರವಾಗಿದ್ದು ಈಗಾಗಲೇ ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಇಂಟರ್ ನೆಟ್ ಬಳಕೆ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 
ವಿಶ್ವಸಂಸ್ಥೆಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ವಿಭಾಗ (ಐಟಿಯು)ದ ಮಾಹಿತಿಯ ಪ್ರಕಾರ 2018 ರ ಅಂತ್ಯಕ್ಕೆ ವಿಶ್ವದ ಒಟ್ಟಾರೆ ಜನಸಂಖ್ಯೆ ಪೈಕಿ 3.9 ಬಿಲಿಯನ್ ಜನರು ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾರಂತೆ. ಅಂದರೆ ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಶೇ.51.2 ರಷ್ಟು ಮಂದಿ ಆನ್ ಲೈನ್ ನಲ್ಲಿರುತ್ತಾರೆ! 
ಜಗತ್ತಿನಾದ್ಯಂತ ಶೇ.51.2 ರಷ್ಟು ಮಂದಿ ಇಂಟರ್ ನೆಟ್ ಬಳಕೆ ಮಾಡುತ್ತಿರುವುದು ಮಹತ್ವದ ಬೆಳವಣಿಗೆ ಎಂದು ಐಟಿಯು ಮುಖ್ಯಸ್ಥ ಹೌಲಿನ್ ಝೌ ಅಭಿಪ್ರಾಯಪಟ್ಟಿದ್ದು, ಡಿಜಿಟಲ್ ಕ್ರಾಂತಿ ಪ್ರತಿಯೊಬ್ಬರನ್ನೂ ತಲುಪುವಂತಾಗಬೇಕೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com