
ಲಂಡನ್ : ಇಂಗ್ಲೆಂಡ್ ನಿಂದ ಭಾರತಕ್ಕೆ ಗಡಿಪಾರು ಮಾಡಿ ಲಂಡನ್ ನ್ಯಾಯಾಲಯ ನೀಡಿರುವ ತೀರ್ಪು ದುರದೃಷ್ಟಕರವಾಗಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.
ಭಾರತದಲ್ಲಿ ಮಲ್ಯ ವಿರುದ್ಧ ದಾಖಲಾಗಿರುವ ವಂಚನೆ, ಅಕ್ರಮ ಹಣ ವರ್ಗಾವಣೆ, ಪಿತೂರಿ ಪ್ರಕರಣಗಳಲ್ಲಿ ವಿಜಯ್ ಮಲ್ಯ ತಪಿತಸ್ಥ ಎಂದು ಕಂಡುಬಂದ ನಂತರ ವೆಸ್ಟ್ ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಎಮ್ಮಾ ಅರ್ಬುಟ್ ನಾಟ್ ಆದೇಶ ಪ್ರಕಟಿಸಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್ ಮಲ್ಯ, ಐಡಿಬಿಐ ಬ್ಯಾಂಕ್ ಗೆ ನಾನು ತಪ್ಪು ಮಾಹಿತಿ ನೀಡಿದ್ದೇನೆ. ಸಾಲದ ಹಣವನೆಲ್ಲಾ ದೋಚಿದ್ದೇನೆ ಎಂದು ಬಾವಿಸಿ ನ್ಯಾಯಾಧೀಶರು ಪೂರ್ವಪರ ವಿಚಾರಿಸದೆ ತೀರ್ಪು ಪ್ರಕಟಿಸಿರುವುದು ದುರದೃಷ್ಟಕರವಾಗಿದೆ ಎಂದರು.
ತನ್ನೆಲ್ಲಾ ಆಸ್ತಿ ಮಾರಾಟ ಮಾಡಿ ಸಾಲ ಮರುಪಾವತಿಸಲು ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದನೇ. ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬೇಕು ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ಮಲ್ಯ ಗಡಿಪಾರು ಪ್ರಕರಣ ಈಗ ಇಂಗ್ಲೆಂಡ್ ಗೃಹ ಕಾರ್ಯದರ್ಶಿಗೆ ವರ್ಗಾಯಿಸಲಾಗಿದೆ. ಈ ಮಧ್ಯೆ ಮಲ್ಯ ಗಡಿಪಾರು ಮಾಡಿ ಲಂಡನ್ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಸಿಬಿಐ ಸ್ವಾಗತಿಸಿದೆ.
Advertisement