ಭಯೋತ್ಪಾದಕರ ವಿರುದ್ಧ ಹೋರಾಡದ ಪಾಕ್ ಗೆ ಅಮೆರಿಕಾ ಒಂದು ಡಾಲರ್ ನೆರವನ್ನೂ ಕೊಡಬಾರದು: ನಿಕ್ಕಿ ಹ್ಯಾಲೆ

ಭಯೋತ್ಪಾದಕ ದಾಳಿಯ ಮೂಲಕ ಅಮೆರಿಕಾ ಸೈನಿಕರನ್ನು ಕೊಲ್ಲುವ ತನ್ನ ನೀಚ ಕೃತ್ಯವನ್ನು ಮುಂದುವರಿಸಿರುವ ಪಾಕಿಸ್ತಾನ ತನ್ನ ಕೃತ್ಯದ ಕುರಿತು ಸ್ಪಷ್ಟನೆ ನೀಡುವವರೆಗೂ ಅಮೆರಿಕಾ ಆ ದೇಶಕ್ಕೆ ......
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ
ನ್ಯೂಯಾರ್ಕ್: ಭಯೋತ್ಪಾದಕ ದಾಳಿಯ ಮೂಲಕ ಅಮೆರಿಕಾ ಸೈನಿಕರನ್ನು ಕೊಲ್ಲುವ ತನ್ನ ನೀಚ ಕೃತ್ಯವನ್ನು ಮುಂದುವರಿಸಿರುವ ಪಾಕಿಸ್ತಾನ ತನ್ನ ಕೃತ್ಯದ ಕುರಿತು ಸ್ಪಷ್ಟನೆ ನೀಡುವವರೆಗೂ ಅಮೆರಿಕಾ ಆ ದೇಶಕ್ಕೆ ಒಂದೇ ಒಂದು ಡಾಲರ್ ನೆರವನ್ನೂ ನೀಡಬಾರದು ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕಾ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಅಮೆರಿಕಾ ಸಂಯುಕ್ತ ಸಂಸ್ಥಾನ ಅಧ್ಯಕ್ಷರ ಸಂಪುಟದಲ್ಲಿ ಕ್ಯಾಬಿನೆಟ್ ಸ್ಥಾನಕ್ಕೆ ನೇಮಕವಾದ ಮೊದಲ ಭಾರತೀಯ-ಅಮೆರಿಕನ್ ಆಗಿರುವ ನಿಕ್ಕಿ ಹ್ಯಾಲೆ ಅಮೆರಿಕಕ್ಕೆ ಹಾನಿಯನ್ನುಂಟುಮಾಡುವ ಯಾವ ದೇಡಕ್ಕೂ ಹಣದ ನೆರವು ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
"ಯಾವ ರಾಷ್ಟ್ರಗಳೊಡನೆ ನಾವು ಪಾಲುದಾರರಾಗಬಹುದು, ಯಾವ ರಾಷ್ಟ್ರದೊಡನೆ ಕೆಲ ಕೆಲಸಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬಹುದು ಎನ್ನುವ ಕುರಿತು ನಾವು ಚಿಂತಿಸಿದ್ದೇನೆ.ಮತ್ತು ಅದಕ್ಕೆ ಅನುಗುಣವಾಗಿ ಮುಂದುವರಿಯುವ ಕಾರ್ಯತಂತ್ರದ ದೃಷ್ಟಿಕೋನವೂ ನಮಗಿರಬೇಕು ಎನ್ನುವುದು ನನ್ನ ಭಾವನೆಯಾಗಿದೆ."ಹ್ಯಾಲೆ ಯುಎಸ್ ಪತ್ರಿಕೆ 'ದಿ ಅಟ್ಲಾಂಟಿಕ್' ಗೆ  ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.
"ಉದಾಹರಣೆಗೆ ಪಾಕಿಸ್ತಾನವನ್ನೇ ತೆಗೆದುಕೊಂಡರೆ ಅಮೆರಿಕಾ ಆ ರಾಷ್ಟ್ರಕ್ಕೆ ಶತಕೋಟಿ ಡಾಲರ್ ನೆರವು ನೀಡುತ್ತಿದೆ. ಹಾಗೆಯೇ ನಮ್ಮ ಸೈನಿಕರು ಆ ರಾಷ್ಟ್ರದ ಸುತ್ತಲೂ ಇರುವ ಭಯೋತ್ಪಾದಕನ್ನೂ ಹೊಡೆದು ಹಾಕುತ್ತಿದ್ದಾರೆ., ಅದು ಸರಿಯಲ್ಲ ಮತ್ತು ನಾವು ಅವರಿಗೆ ಒಂದು ಡಾಲರ್ ಸಹ ನೀಡಬಾರದು.ನಮ್ಮ ಹಣವನ್ನು ಬಳಸಿ ನಮ್ಮ ಸೈನಿಕರಿಗೇ ಅಪಾಯವೆಸಗುವ ರಾಷ್ಟ್ರಕ್ಕೆ ನಾವು ನೆರವು ನ್ನಿಲ್ಲಿಸಬೇಕು"
ವಿಶ್ವಸಂಸ್ಥೆ ಪ್ರತಿನಿಧಿಯಾಗಿರುವ ಹ್ಯಾಲೆ ಅವರ ಅವಧಿ ಈ ವರ್ಷಾಂತಕ್ಕೆ ಕೊನೆಯಾಗಲಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ರಾಜ್ಯ ಇಲಾಖೆಯ ಮುಖ್ಯ ವಕ್ತಾರ, ಫಾಕ್ಸ್ ನ್ಯೂಸ್ ನ ಮಾಜಿ ಪತ್ರಕರ್ತ ಹೀದರ್ ನೌರ್ಟ್ ಅವರನ್ನು ಹ್ಯಾಲೆ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ನಾಮನಿರ್ದೇಶನ ಮಾಡಿದ್ದರು.ಕಳೆದ ಅಕ್ಟೋಬರ್ ನಲ್ಲಿ ಹ್ಯಾಲೆ ತಾವು ಈ ವರ್ಷದ ಅಂತ್ಯಕ್ಕೆ ತಮ್ಮ ಸ್ಥಾನವನ್ನು ತೊರೆಯುತ್ತಿರುವುದಾಗಿ ಘೋಷಿಸಿದ್ದರು.ದಕ್ಷಿಣ ಕೆರೋಲಿನಾ ಪ್ರಾಂತದ ಮಾಜಿ ಗವರ್ನರ್ ಆಗಿದ್ದ ಹ್ಯಾಲೆ ಸುಮಾರು ಎರಡು ವರ್ಷ ಕಾಲ ಈ ಮಹತ್ವದ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.
ಪಾಕ್ ಗೆ ನೀವು ಕೇವಲ ಡಾಲರ್ ರೂಪದ ಹಣದ ನೆರವು ನೀಡಿರಿ, ಇದನ್ನು ನೀವು ಕುರುಡರಂತೆ ನೀಡುತ್ತಾ ಹೋಗಿ ಮತ್ತು ನಂತರ ಒಳ್ಳೆಯ ಫಲಿತಾಂಶ ನಿರೀಕ್ಷಿಸಿ ಎನ್ನುವುದನ್ನು ನಾನು ಒಪ್ಪುವುದಿಲ್ಲ ಎಂದು ಹ್ಯಾಲೆ ಹೇಳಿದ್ದಾರೆ.ಒಳ್ಳೆಯ ಅಭಿರುಚಿಗಾಗಿ ನೀವು ಕೇಳಬೇಕು ಮತ್ತು ಒಳ್ಳೆಯ ಸಂಗತಿಗಳು ಸಂಭವಿಸಿದಾಗ ನೀವು ಅದನ್ನು ನೀಡಬೇಕು
ಪಾಕಿಸ್ತಾನದಲ್ಲಿ ನೆಲೆಗೊಂಡ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಅಲ್ಲಿನ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸದ ಕಾರಣ ಟ್ರಂಪ್ ಸರ್ಕಾರ ಕಳೆದ ಸೆಪ್ಟೆಂಬರ್ ನಲ್ಲಿ300 ಮಿಲಿಯನ್ ಯುಎಸ್ ಡಾಲರ್ ಸಹಾಯವನ್ನು ರದ್ದುಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com