ಟ್ರಂಪ್ ಕಾನೂನು ಶುಲ್ಕ 293,000 ಡಾಲರ್ ಪಾವತಿಸುವಂತೆ ನೀಲಿ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಕೋರ್ಟ್ ಆದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಸೆಕ್ಸ್ ಆರೋಪ ಮಾಡಿದ್ದ ನೀಲಿ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಟ್ರಂಪ್ ಕಾನೂನು ಶುಲ್ಕವಾಗಿ 293.000 ಡಾಲರ್ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.
ಸ್ಟೊರ್ಮಿ ಡೇನಿಯಲ್ಸ್
ಸ್ಟೊರ್ಮಿ ಡೇನಿಯಲ್ಸ್
ಲಾಸ್ ಏಂಜಲಿಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಸೆಕ್ಸ್ ಆರೋಪ ಮಾಡಿದ್ದ ನೀಲಿ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಟ್ರಂಪ್ ಕಾನೂನು ಶುಲ್ಕವಾಗಿ 293.000 ಡಾಲರ್ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.
ಟ್ರಂಪ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದ ನೀಲಿ ತಾರೆಯ ಅರ್ಜಿಯನ್ನು ಲಾಸ್ ಏಂಜಲಿಸ್ ನ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದರು. ಹೀಗಾಗಿ ಟ್ರಂಪ್ ವಕೀಲ ಚಾರ್ಲೆಸ್ ಹರ್ಡೆರ್ ಅವರು ಸುಮಾರು 390,000 ಡಾಲರ್ ಕಾನೂನು ಶಲ್ಕಕ್ಕೆ ಮನವಿ ಮಾಡಿದ್ದರು. 
ಟ್ರಂಪ್ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಾಧೀಶ ಎಸ್ ಜೇಮ್ಸ್ ಒಟೆರೊ ಅವರು ಕಾನೂನು ಶುಲ್ಕದಲ್ಲಿ ಶೇ.25ರಷ್ಟು ಕಡಿತಗೊಳಿಸಿ 293,000 ಡಾಲರ್ ಕಾನೂನು ಶುಲ್ಕ ಹಾಗೂ ಪ್ರಕರಣ ದಾಖಲಿಸಿದ್ದಕ್ಕೆ 1,000 ಡಾಲರ್ ಪಾವತಿಸುವಂತೆ ಸ್ಟಾರ್ಮಿಗೆ ಸೂಚಿಸಿದೆ.
ನೀಲಿ ತಾರೆಯ ಅರ್ಜಿ ವಜಾಗೊಳಿಸಿದ್ದ ಒಟೆರೊ ಅವರು, 10 ವರ್ಷಗಳ ಹಿಂದೆ ಇಬ್ಬರೂ ಪಲ್ಲಂಗದಲ್ಲಿದ್ದ ಪ್ರಕರಣದ ಬಗ್ಗೆ ನಟಿ ಈಗ ಬಾಯಿ ಬಿಟ್ಟು ಅಧ್ಯಕ್ಷರಿಗೆ ಬೆದರಿಕೆಗಳನ್ನು ಹಾಕಿ ಸಾಕಷ್ಟು ರಾದ್ಧಾಂತಗಳನ್ನು ಮಾಡಿದ್ದಾರೆ. ಹೀಗಾಗಿ ಈ ಮಾನಹಾನಿಯನ್ನು ಪುರಸ್ಕರಿಸಲು ಸಾಧ್ಯವಾಗದು ಎಂದು ಹೇಳಿದ್ದರು.
ಈ ಕಾನೂನು ಸಮರದಲ್ಲಿ ಟ್ರಂಪ್ ಜಯ ಸಾಧಿಸಿರುವುದು ಈ ವಿಷಯದಲ್ಲಿ ವಿರೋಧಿಗಳ ಪ್ರಬಲ ಅಸ್ತ್ರ ಮೊಂಡಾಗುವಂತೆ ಮಾಡಿದೆ. ಆದರೆ ಟ್ರಂಪ್ ವಿರುದ್ಧ ಸ್ಟ್ರಾಮಿ ಡೇನಿಯಲ್ಸ್(ಸ್ಟೀಫಾನೆ ಕ್ಲಿಫ್‍ಫೋರ್ಡ್) ಹೂಡಿರುವ ಮತ್ತೊಂದು ದಾವೆ ಇತ್ಯರ್ಥಕ್ಕೆ ಬಾಕಿ ಇದೆ.
2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಡೊನಾಲ್ಡ್ ಟ್ರಂಪ್ ಅವರು ಸಂಬಂಧ ಬಹಿರಂಗಪಡಿಸದಂತೆ ನನ್ನ ಜೊತೆ ಗುಪ್ತ ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕಾಗಿ 1.30 ಲಕ್ಷ ಡಾಲರ್ ಹಣ ನೀಡಿದ್ದರು ಎಂದು ಆರೋಪಿಸಿ ಸ್ಟಾರ್ಮಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com