ಟ್ರಂಪ್ ಜತೆ ಭಿನ್ನಾಭಿಪ್ರಾಯ: ರಕ್ಷಣಾ ಕಾರ್ಯದರ್ಶಿ ಸ್ಥಾನಕ್ಕೆ ಜಿಮ್ ಮ್ಯಾಟಿಸ್ ರಾಜೀನಾಮೆ

ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಸಿರಿಯಾದಿಂದ ಸೇನೆ ಹಿಂಪಡೆಯಲು ಆದೇಶಿಸಿದ ಬೆನ್ನಲ್ಲೇ ಅಮೆರಿಕದ...
ಜಿಮ್ ಮ್ಯಾಟಿಸ್
ಜಿಮ್ ಮ್ಯಾಟಿಸ್
ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಸಿರಿಯಾದಿಂದ ಸೇನೆ ಹಿಂಪಡೆಯಲು ಆದೇಶಿಸಿದ ಬೆನ್ನಲ್ಲೇ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅವರು ಗುರುವಾರ ತಮ್ಮ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಟ್ರಂಪ್ ಗೆ ರಾಜೀನಾಮೆ ಪತ್ರ ರವಾನಿಸಿರುವ ಮ್ಯಾಟಿಸ್ ಅವರು, ತಾವು ಹುದ್ದೆಯಿಂದ ಕೆಳಗಿಳಿಯಲು ಇದು ಸರಿಯಾದ ಸಮಯ ಮತ್ತು ರಕ್ಷಣಾ ಕಾರ್ಯದರ್ಶಿ ಹುದ್ದೆ ನಿರ್ವಹಿಸಲು ಅಮೆರಿಕ ಅಧ್ಯಕ್ಷರು ಅರ್ಹರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 28, 2019ಕ್ಕೆ ನನ್ನ ಅವಧಿ ಅಂತ್ಯಗೊಳ್ಳಲಿದೆ. ನೂತನ ರಕ್ಷಣಾ ಕಾರ್ಯದರ್ಶಿ ಆಯ್ಕೆ ಮಾಡಲು ಅಮೆರಿಕ ಸರ್ಕಾರಕ್ಕೆ ಸಾಕಷ್ಟು ಸಮಯ ಇದೆ ಎಂದು ಮ್ಯಾಟಿಸ್ ಅವರು ಹೇಳಿದ್ದಾರೆ.
68 ವರ್ಷದ ಮ್ಯಾಟಿಸ್ ಅವರು, ಸಿರಿಯಾದಿಂದ ಅಮೆರಿಕ ಸೇನೆ ಹಿಂಪಡೆದ ಕಾರಣಕ್ಕೇ ತಾವು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿಲ್ಲ. ಆದರೆ ಸೇನೆ ಹಿಂಪಡೆಯುವ ನಿರ್ಧಾರ ಸೇರಿದಂತೆ ಹಲವು ವಿಚಾರಗಳಲ್ಲಿ ಟ್ರಂಪ್ ಜತೆ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com