ಇಂಡೋನೇಷಿಯಾ: ಭೀಕರ ಸುನಾಮಿಯ ಅಟ್ಟಹಾಸ, ಸಾವಿನ ಸಂಖ್ಯೆ 373ಕ್ಕೆ ಏರಿಕೆ

ಇಂಡೋನೇಷಿಯಾದಲ್ಲಿ ಉಂಟಾದ ಭೀಕರ ಸುನಾಮಿಗೆ ಸತ್ತವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು ಇತ್ತೀಚಿನ ವರದಿಯಂತೆ ಸಾವಿನ ಸಂಖ್ಯೆ 373ಕ್ಕೆ ತಲುಪಿದೆ.
ಇಂಡೋನೇಷಿಯಾ: ಭೀಕರ ಸುನಾಮಿಯ ಅಟ್ಟಹಾಸ, ಸಾವಿನ ಸಂಖ್ಯೆ 373ಕ್ಕೆ ಏರಿಕೆ
ಇಂಡೋನೇಷಿಯಾ: ಭೀಕರ ಸುನಾಮಿಯ ಅಟ್ಟಹಾಸ, ಸಾವಿನ ಸಂಖ್ಯೆ 373ಕ್ಕೆ ಏರಿಕೆ
Updated on
ಜಕಾರ್ತಾ: ಇಂಡೋನೇಷಿಯಾದಲ್ಲಿ ಉಂಟಾದ ಭೀಕರ ಸುನಾಮಿಗೆ ಸತ್ತವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು ಇತ್ತೀಚಿನ ವರದಿಯಂತೆ ಸಾವಿನ ಸಂಖ್ಯೆ 373ಕ್ಕೆ ತಲುಪಿದೆ. ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ಭೀಕರ ಸುನಾಮಿಯಿಂದ ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ರಾಕ್ಷಸ ಸ್ವರೂಪದ ಅಲೆಗಳಿಂದ ನೂರಾರು ಮನೆ, ಕಟ್ಟಡಗಳು, ಊರಿಗೆ ಊರೇ ಕೊಚ್ಚಿಕೊಂಡು ಹೋಗಿದೆ.ಇನ್ನು ಅವಶೇಷಗಳ್ಡಿ ಬದುಕುಳಿದವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಸುಂದಾ ಜಲಸಂಧಿಯ ಅಂದ್ಚಿನುದ್ದಕ್ಕೆ ಶನಿವಾರ ಸಂಜೆ ವೇಳೆಗೆ ಯಾವ ಮುನ್ಸೂಚನೆ ಇಲ್ಲದೆ ಅಪ್ಪಳಿಸಿದ ಸುನಾಮಿ ಅನಾಹುತದ ಸರಮಾಲೆಯನ್ನೇ ಸೃಷ್ಟಿಸಿದೆ.
ಭೀಕರ ಅನಾಹುತದ ಬಳಿಕ ಸಮುದ್ರ ತೀರದಲಿ ವಾಸವಿದ್ದ ಮೂರು ಸಾವಿರಕ್ಕೂ ಅಧಿಕ ಮಂದಿ ಎತ್ತರದ ಸ್ಥಳಗಳಿಗೆ ತೆರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com