ಬಾಂಗ್ಲಾದೇಶ ಚುನಾವಣೆ: ಪ್ರಧಾನಿಯಾಗಿ ಶೇಖ್ ಹಸೀನಾ ಪುನರಾಯ್ಕೆ
ಬಾಂಗ್ಲಾದೇಶ ಚುನಾವಣೆ: ಪ್ರಧಾನಿಯಾಗಿ ಶೇಖ್ ಹಸೀನಾ ಪುನರಾಯ್ಕೆ

ಬಾಂಗ್ಲಾದೇಶ ಚುನಾವಣೆ: ಪ್ರಧಾನಿಯಾಗಿ ಶೇಖ್ ಹಸೀನಾ ಪುನರಾಯ್ಕೆ

ಬಾಂಗ್ಲಾದೇಶದಲ್ಲಿ ನಡೆದಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಬಹುಮತ ದೊರೆತಿದ್ದು ಶೇಖ್ ಹಸೀನಾ ಪ್ರಧಾನಿಯಾಗಿ ಪುನರಾಯ್ಕೆಯಾಗಿದ್ದಾರೆ.
ಢಾಕಾ: ಬಾಂಗ್ಲಾದೇಶದಲ್ಲಿ ನಡೆದಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಬಹುಮತ ದೊರೆತಿದ್ದು ಶೇಖ್ ಹಸೀನಾ ಪ್ರಧಾನಿಯಾಗಿ ಪುನರಾಯ್ಕೆಯಾಗಿದ್ದಾರೆ. 
ಶೇಖ್ ಹಸೀನಾ ಅವರ ಪಕ್ಷದ ಅಭ್ಯರ್ಥಿಗಳು ಸರ್ಕಾರ ರಚನೆಗೆ ಬೇಕಾಗಿರುವ 151 ಸ್ಥಾನಗಳಲ್ಲಿ ಗೆದ್ದಿದ್ದಾರೆ.  ಡಿ.30 ರ ಮಧ್ಯರಾತ್ರಿ ವರೆಗೆ ಪ್ರಕಟವಾದ ಫಲಿತಾಂಶದ ಪ್ರಕಾರ ಹಸೀನಾ ಅವರ ವಿರುದ್ಧ ರಚನೆಯಾಗಿದ್ದ ವಿಪಕ್ಷಗಳ ಮೈತ್ರಿ ಕೇವಲ 5 ಸ್ಥಾನಗಳಲ್ಲಿ ಗೆದ್ದಿದ್ದು ಅವಾಮಿ ಲೀಗ್ ಹಾಗೂ ಮಿತ್ರ ಪಕ್ಷಗಳು ಒಟ್ಟಾರೆ 191 ಸ್ಥಾನಗಳಲ್ಲಿ ಗೆದ್ದಿದ್ದಾರೆ. 
ಚುನಾವಣಾ ಫಲಿತಾಂಶವನ್ನು ಬಾಂಗ್ಲಾದೇಶದ ವಿಪಕ್ಷಗಳು ತಿರಸ್ಕರಿಸಿದ್ದು, ಆಡಳಿತಾರೂಢ ಪಕ್ಷದ ವಿರುದ್ಧ ಮತಗಳನ್ನು ತಿರುಚಿರುವ (ವೋಟ್ ರಿಗ್ಗಿಂಗ್) ಆರೋಪ ಮಾಡಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ನಾಯಕರು " ಚುನಾವಣಾ ಆಯೋಗ ತಕ್ಷಣವೇ ಫಲಿತಾಂಶವನ್ನು ಅನೂರ್ಜಿತಗೊಳಿಸಬೇಕೆಂದು ಮನವಿ ಮಾಡಿದ್ದು ಮತ್ತೊಂದು ಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. 
ಇದೇ ಕಾರಣಕ್ಕಾಗಿ ಉಭಯ ಪಕ್ಷಗಳ ನಡುವಿನ ಕಾರ್ಯಕರ್ತರು, ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದ್ದು,  ಪೊಲೀಸರ ಗುಂಡೇಟಿಗೆ 17 ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘರ್ಷಣೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪ್ರತಿಪಕ್ಷದ ಕಾರ್ಯಕರ್ತರಿಂದ ಓರ್ವ ಪೊಲೀಸ್ ಅಧಿಕಾರಿ ಸಹ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com