ನೇಪಾಳದಲ್ಲಿ ಸುಷ್ಮಾ ಸ್ವರಾಜ್
ವಿದೇಶ
ನೇಪಾಳದ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಗೆ ಭಾರತದ ಬೆಂಬಲಿವಿದೆ: ಸುಷ್ಮಾ ಸ್ವರಾಜ್
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೇಪಾಳದೊಂದಿಗೆ ಭಾರತದ ಐತಿಹಾಸಿಕ ಹಾಗೂ ವಿವಿಧ ಆಯಾಮದ ಸಂಬಂಧವನ್ನು ಮುನ್ನಡೆಸುವ ಕುರಿತಂತೆ.........
ಕಟ್ಮಂಡು: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೇಪಾಳದೊಂದಿಗೆ ಭಾರತದ ಐತಿಹಾಸಿಕ ಹಾಗೂ ವಿವಿಧ ಆಯಾಮದ ಸಂಬಂಧವನ್ನು ಮುನ್ನಡೆಸುವ ಕುರಿತಂತೆ ಚರ್ಚೆ ನಡೆಸಿದ್ದಾರೆ. ನೇಪಾಳದ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಗೆ ನವದೆಹಲಿ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಸುಷ್ಮಾ ಸ್ವರಾಜ್ ಇಂದು ನೇಪಾಳದ ಉನ್ನತ ನಾಯಕರೊಡನೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಎರಡು ದಿನಗಳ ಸೌಹಾರ್ದ ಭೇಟಿಗಾಗಿ ನಿನ್ನೆ ನೇಪಾಳ ರಾಜಧಾನಿ ಕಟ್ಮಂಡುವಿಗೆ ಆಗಮಿಸಿದ ಸುಷ್ಮಾ ಸ್ವರಾಜ್ ರಾಷ್ಟ್ರಾಧ್ಯಕ್ಷ ಬಿದ್ಯಾ ದೇವಿ ಭಂಡಾರಿ, ಪ್ರಧಾನ ಮಂತ್ರಿ ಶೇರ್ ಬಹದ್ದೂರ್ ದೇವುಬಾ ಜತೆಗೆ ಸಿಪಿಎನ್ ಮಾವೋವಾದಿ ನಾಯಕ ಪ್ರಚಂಡ ಅವರೊಡನೆ ಮಾತುಕತೆ ನಡೆಸಿದ್ದಾರೆ.
"ನಾವು ನೇಪಾಳವು ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿ ಸಾಧಿಸಲು ಸಂಪೂರ್ಣ ಸಹಕಾರವನ್ನು ನೀಡುತ್ತೇವೆ" ಪ್ರಚಂಡ ಅವರ ಭೇಟಿಯ ಬಳಿಕ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
"ಚುನಾವಣೆಯ ನಂತರದ ಪರಿಸ್ಥಿತಿ ಮತ್ತು ಹೊಸ ಸರ್ಕಾರ ರಚನೆಗೆ ಸಿದ್ಧತೆ ಕುರಿತು ನಾವು ಚರ್ಚಿಸಿದ್ದೇವೆ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ನಾವು ಬಯಸುತ್ತೇವೆ, ನೆರೆಯ ರಾಷ್ಟ್ರಗಳೊಡನೆ ಸಹಕಾರ ವನ್ನು ನಾವು ಇಷ್ಟಪಡುವುದಾಗಿ ಸ್ವರಾಜ್ ಗೆ ಹೇಳಿದ್ದೇವೆ, ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಸಾಧಿಸುವ ಪ್ರಯತ್ನದಲ್ಲಿ ಭಾರತ ನೇಪಾಳಕ್ಕೆ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ. "ಪ್ರಚಂಡ ಹೇಳಿದ್ದಾರೆ.
ನೇಪಾಳದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಲು ಸ್ವರಾಜ್ ಅವರು ಕುತೂಹಲ ತಾಳಿದ್ದಾರೆಂದು ಪ್ರಚಂಡ ಹೇಳಿದ್ದಾರೆ. "ನಾವು ನಡೆಸಿದ ಮಾತುಕತೆಗಳು ಸಂಪೂರ್ಣ ಧನಾತ್ಮಕ ಮತ್ತು ರಚನಾತ್ಮಕವಾವಾಗಿದ್ದವು. ಅವರು ಇತ್ತೀಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ ಜಯ ಸಾಧಿಸಿದ ಎಡ ಪಕ್ಷಗಳ ಒಕ್ಕೂಟವನ್ನು ಅಭಿನಂದಿಸಿದರು," ಪ್ರಚಂಡ ನುಡಿದರು. ನೇಪಾಳದಲ್ಲಿ ನಡೆದ ಚುನಾವಣೆಯಲ್ಲಿ ವಿಜೇತರಾದ ಪ್ರಧಾನಿ ದೇವುಬಾ ಅವರನ್ನು ಸಹ ಸುಷ್ಮಾ ಸ್ವರಾಜ್ ಅಭಿನಂದಿಸಿದ್ದಾರೆ.
ರಾಷ್ಟ್ರಾಧ್ಯಕ್ಷ ಭಂಡಾರಿ ಅವರ ಜತೆ ಮಾತುಕತೆ ಸಂದರ್ಭದಲ್ಲಿ, ನೇಪಾಳದಲ್ಲಿ ಶಾಂತಿಯುತ ಚುನಾವಣೆ ನಡೆಸಿದುದರ ಬಗೆಗೆ ಸ್ವರಾಜ್ ಅಭಿನಂದನೆ ಸಲ್ಲಿಸಿದ್ದಾರೆ. ಸುಷ್ಮಾ ಸ್ವರಾಜ್ ತಮ್ಮ ನಿನ್ನೆಯ ಭೇಟಿಯಲ್ಲಿ ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿಯೊಂದಿಗೆ.ಮಾತುಕತೆ ನಡೆಸಿದ್ದಾರ. ಒಲಿ ನೇಪಾಳದ ಭವಿಷ್ಯದ ಪ್ರಧಾನಿಗಳಾಗುವ ಸಾಧ್ಯತೆಗಳಿದೆ ಎನ್ನಲಾಗಿದ್ದು ಮಾಧೇಸಿ ಪಕ್ಷಗಳ ಪ್ರಮುಖ ನಾಯಕರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ