ಮಾಲ್ಡೀವ್ಸ್ ನಲ್ಲಿ ರಾಜಕೀಯ ಆಸ್ಥಿರತೆ: ಭಾರತ ಮಧ್ಯಪ್ರವೇಶಕ್ಕೆ ಮಾಜಿ ರಾಷ್ಟ್ರಾಧ್ಯಕ್ಷರ ಆಗ್ರಹ

ದ್ವೀಪರಾಷ್ಟ್ರ ಮಾಲ್ಡೀವ್ಸ್ ನಲ್ಲಿ ಉಂಟಾಗಿರುವ ರಾಜಕೀಯ ಆಸ್ಥಿರತೆ ಬಗೆಹರಿಸಲು ಭಾರತ ಕ್ಷಿಪ್ರಗತಿಯಲ್ಲಿ ಮುಂದಾಗುವಂತೆ ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಾಸೀದ್ ಒತ್ತಾಯಿಸಿದ್ದಾರೆ.
ಮಾಲ್ಡೀವ್ಸ್ ನ  ಮಾಜಿ ಅಧ್ಯಕ್ಷ ಮೊಹಮ್ಮದ್  ನಾಸೀದ್ ಚಿತ್ರ
ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಾಸೀದ್ ಚಿತ್ರ

ಕೊಲೊಂಬೊ: ದ್ವೀಪರಾಷ್ಟ್ರ ಮಾಲ್ಡೀವ್ಸ್ ನಲ್ಲಿ ಉಂಟಾಗಿರುವ ರಾಜಕೀಯ ಆಸ್ಥಿರತೆ ಬಗೆಹರಿಸಲು ಭಾರತ ಕ್ಷಿಪ್ರಗತಿಯಲ್ಲಿ ಮುಂದಾಗುವಂತೆ ಮಾಲ್ಡೀವ್ಸ್ ನ  ಮಾಜಿ ಅಧ್ಯಕ್ಷ ಮೊಹಮ್ಮದ್  ನಾಸೀದ್  ಒತ್ತಾಯಿಸಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನಾ ಘೋಷಿಸಿದ ರಾಜ್ಯ ತುರ್ತುಪರಿಸ್ಥಿತಿ ಹಾಗೂ ಉನ್ನತ ನ್ಯಾಯಾಲಯದ ನ್ಯಾಯಾಧೀಶರ ಬಂಧನದಿಂದ ರಾಜಕೀಯ ಅಸ್ಥಿರತೆ ತಲೆದೋರಿದೆ.

ಭಾರತ ತನ್ನ ರಾಯಬಾರಿ ಅಧಿಕಾರಿಯನ್ನು ಕಳುಹಿಸಬೇಕು,  ಸೇನೆಯ ಮೂಲಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ಮಾಜಿ ಅಧ್ಯಕ್ಷ ಮೆಹುಮೂನ್ ಅಬ್ದುಲ್ ಗಯೂಮ್ ಅವರನ್ನು ಬಿಡುಗಡೆಗೊಳಿಸಬೇಕು, ಅವರನ್ನು ದೈಹಿಕವಾಗಿ ಹಾಜರುಪಡಿಸಬೇಕು ಎಂದು ಮೊಹಮ್ಮದ್  ನಾಸೀದ್ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯ ತುರ್ತುಪರಿಸ್ಥಿತಿ ಘೋಷಣೆಯಿಂದಾಗಿ ಮೂಲಭೂತ ಹಕ್ಕುಗಳು ರದ್ದುಗೊಂಡಿವೆ.ಸುಪ್ರೀಂಕೋರ್ಟಿನ ರದ್ದತಿಯಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ  ಘೋಷಣೆ ಅಸಂವಿಧಾನಿಕ ಹಾಗೂ ಕಾನೂನುಬಾಹಿರವಾಗಿದ್ದು, ಯಾವ ಪ್ರಜೆಯೂ ಆದೇಶ ಪಾಲಿಸಬಾರದು ಎಂದು ಅವರು ಹೇಳಿದ್ದಾರೆ.

ಅಬ್ದುಲ್ಲಾ ಯಮೀನಾ ಅವರಿಂದ ಅಧಿಕಾರ ವಾಪಾಸ್ ಪಡೆಯಬೇಕು, ಭಾರತ ಅಥವಾ ಅಮೆರಿಕಾದಂತಹ ಜಾಗತಿಕ ರಾಷ್ಟ್ರಗಳ ಸರ್ಕಾರ ಮುನ್ನಡೆಸಬೇಕೆಂಬುದು ಇಲ್ಲಿನ ಜನರ ಮನವಿಯಾಗಿದೆ . ಯಮೀನ್ ಅವರ ಪ್ರಾಂತ್ಯದ ನಾಯಕರಿಗೆ ನೀಡುತ್ತಿರುವ ಎಲ್ಲಾ ಹಣಕಾಸಿನ ನೆರವನ್ನು ಅಮೆರಿಕಾದ ಹಣಕಾಸು ಸಂಸ್ಥೆಗಳು ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

50 ವರ್ಷದ ಮೊಹಮ್ಮದ್ ನಾಸೀರ್ ದೇಶದ ಮೊದಲ ಪ್ರಜಾಸತ್ಮಾತ್ಮಕ ಚುನಾಯಿತ ನಾಯಕರಾಗಿದ್ದಾರೆ.ಉಗ್ರ ಚಟುವಟಿಕೆ ಪ್ರಕರಣದಲ್ಲಿ ಕ್ರಿಮಿನಲ್ ನ್ಯಾಯಾಧೀಶ  ಅಬ್ದುಲ್ಲಾ ಮೊಹಮ್ಮದ್ ಬಂಧನಕ್ಕೆ ಸಂಬಂಧಿಸಿದಂತೆ 2015 ಮಾರ್ಚ್ ತಿಂಗಳಿನಿಂದ 13 ವರ್ಷ ಜೈಲುಶಿಕ್ಷೆಗೆ  ಗುರಿಯಾಗಿದ್ದಾರೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com