ಮಸ್ಕತ್: ಸುಲ್ತಾನ್ ಖಬೂಸ್ ಮಸೀದಿಗೆ ಪ್ರಧಾನಿ ಮೋದಿ ಭೇಟಿ

ಮೂರು ದಿನಗಳ ವಿದೇಶ ಪ್ರವಾಸದ ಕೊನೆಯ ಚರಣದಲ್ಲಿ ಒಮಾನ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರಮೋದಿ ಇಂದು ಮಸ್ಕತ್ ನಲ್ಲಿನ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದರು.
ಪ್ರಧಾನಿ ಮೋದಿ ಮಸ್ಕತ್ ನಲ್ಲಿನ ಸುಲ್ತಾನ್ ಖಬೂಸ್ ಮಸೀದಿಗೆ ಭೇಟಿ ಚಿತ್ರ
ಪ್ರಧಾನಿ ಮೋದಿ ಮಸ್ಕತ್ ನಲ್ಲಿನ ಸುಲ್ತಾನ್ ಖಬೂಸ್ ಮಸೀದಿಗೆ ಭೇಟಿ ಚಿತ್ರ

ಒಮಾನ್ : ಮೂರು ದಿನಗಳ ವಿದೇಶ ಪ್ರವಾಸದ ಕೊನೆಯ ಚರಣದಲ್ಲಿ ಒಮಾನ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರಮೋದಿ ಇಂದು ಮಸ್ಕತ್ ನಲ್ಲಿನ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದರು.

ಆನಂತರ ಅಲ್ಲಿಯೇ ಇರುವ ಸುಲ್ತಾನ್ ಖಬೂಸ್ ಮಸೀದಿಗೆ ಭೇಟಿ ನೀಡಿದ್ದರು. ಇದು ಓಮಾನ್ ನಲ್ಲಿ ಅತ್ಯಂತ ದೊಡ್ಡದಾದ ಮಸೀದಿಯಾಗಿದೆ. ಭಾರತದಿಂದ ಸುಮಾರು 3 ಲಕ್ಷ ಟನ್ ಮರಳು ಗಲ್ಲು ಬಳಸಿ ಈ ಮಸೀದಿ ನಿರ್ಮಾಣ ಮಾಡಲಾಗಿದೆ.

ಒಮಾನ್ ಗೆ ನಿನ್ನೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರಮೋದಿ ಅವರಿಗೆ ಅದ್ದೂರಿ ಸ್ವಾಗತ ದೊರೆಯಿತು.ಸಚಿವ ಸಮಿತಿಯ ಉಪಪ್ರಧಾನಿ ಸಯ್ಯದ್ ಪಾದ್ ಬಿನ್ ಮೊಹಮ್ಮದ್  ಅಲ್ ಸಯೀದ್ ಮತ್ತು ಅಂತಾರಾಷ್ಟ್ರೀಯ ಸಂಬಂಧ ಮತ್ತು ಸಹಕಾರ ವ್ಯವಹಾರಗಳ ಉಪಪ್ರಧಾನಿ ಸಯ್ಯದ್ ಅಸಾದ್ ಬಿನ್ ತಾರೀಖ್ ಅಲ್ ಸಯೀದ್ ಅವರನ್ನು ಭೇಟಿ ಮಾಡಿ ಹಲವು ವಿಷಯ ಕುರಿತಂತೆ ಚರ್ಚೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com