ಹಜ್ ಯಾತ್ರೆ ವೇಳೆ ಲೈಂಗಿಕ ಕಿರುಕುಳ: ಟ್ವಿಟ್ಟರ್ ನಲ್ಲಿ ಕಹಿ ಅನುಭವ ಹಂಚಿಕೊಂಡ ಮುಸ್ಲಿಂ ಮಹಿಳೆಯರು

ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಯಾವ ಜಾಗವನ್ನು ಕೂಡ ಬಿಟ್ಟಿಲ್ಲ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಯಾವ ಜಾಗವನ್ನು ಕೂಡ ಬಿಟ್ಟಿಲ್ಲ ಎನ್ನಬಹುದು. ಇದೀಗ ಹಜ್ ಯಾತ್ರೆಗೂ ಅದರ ಕಪ್ಪುಚುಕ್ಕೆ ಅಂಟಿಕೊಂಡಿದೆ.

ಜಗತ್ತಿನಾದ್ಯಂತ ಇರುವ ಮುಸಲ್ಮಾನರಿಗೆ ಹಜ್, ಇಸ್ಲಾಂ ಧರ್ಮದಲ್ಲಿ ಐದನೇ ಮತ್ತು ಕೊನೆಯ ಆಧಾರಸ್ಥಂಭವಾಗಿದೆ. ವಯಸ್ಕ ಮುಸಲ್ಮಾನರು ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕೆಂದು ಬಯಸುತ್ತಾರೆ.

ಪಶ್ಚಿಮ ಸೌದಿ ಅರೇಬಿಯಾದಲ್ಲಿರುವ ಅತ್ಯಂತ ಪವಿತ್ರ ಧಾರ್ಮಿಕ ಸ್ಥಳ ಮೆಕ್ಕಾಗೆ ಪ್ರತಿವರ್ಷ  ಸಾವಿರಾರು ಮುಸಲ್ಮಾನ ಮಹಿಳೆಯರು ಮತ್ತು ಪುರುಷರು  ಯಾತ್ರೆ ಹೋಗುತ್ತಾರೆ. ತಮ್ಮ ಪಾಪಗಳನ್ನು ಕಳೆದು ದೇವರ ಅನುಗ್ರಹ ಪಡೆಯಲು ಪ್ರವಾದಿ ಮೊಹಮ್ಮದನ ಜನ್ಮಸ್ಥಳವಾದ ಹಜ್ ಗೆ ಯಾತ್ರೆ ಕೈಗೊಳ್ಳುವುದು ಜೀವನದಲ್ಲಿ ಬಹಳ ದೊಡ್ಡ ಅವಕಾಶ ಎಂದು ಮುಸಲ್ಮಾನರು ಭಾವಿಸುತ್ತಾರೆ.

ಆದರೆ ಕೆಲವು ಮುಸಲ್ಮಾನ ಮಹಿಳೆಯರಿಗೆ ಹಜ್ ಯಾತ್ರೆಗೆ ಹೋಗಿದ್ದಾಗ ಕೆಲವು ಕಹಿ ಅನುಭವಗಳಾಗಿವೆ. ಇದಕ್ಕೆ #Mosquemetoo ಎಂಬ ಹ್ಯಾಶ್ ಟಾಗ್ ನೊಂದಿಗೆ ಮೆಕ್ಕಾ ಮತ್ತು ಇತರ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅನುಭವಕ್ಕೆ ಬಂದ ಲೈಂಗಿಕ ಕಿರುಕುಳಗಳನ್ನು ಹಂಚಿಕೊಂಡಿದ್ದಾರೆ.

ಈಜಿಪ್ಟ್-ಅಮೆರಿಕಾ ಮಹಿಳಾವಾದಿ ಹಾಗೂ ಪತ್ರಕಕ್ತೆ ಮೊನಾ ಎಲ್ಟವಿಯವರು ಈ ಹ್ಯಾಶ್ ಟಾಗ್ ನೊಂದಿಗೆ ಅಭಿಯಾನ ಕೈಗೊಂಡಿದ್ದು ಮೊದಲ ಬಾರಿಗೆ ತಮಗಾದ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ತಾನು 15ನೇ ವರ್ಷದಲ್ಲಿದ್ದಾಗ ಹಜ್ ಯಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಮೊನಾ ಎಲ್ಟವಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಂತೆ ಅದು ಟ್ವಿಟ್ಟರ್ ನಲ್ಲಿ ವೈರಲ್ ಆಗಿ ಸಾವಿರಾರು ಮಂದಿ ಮುಸ್ಲಿಂ ಮಹಿಳೆಯರು ಮತ್ತು ಪುರುಷರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.  ಅದು ಫಾರ್ಸಿ ಟ್ವಿಟ್ಟರ್ ಪುಟದಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ.

ಹಜ್ ಯಾತ್ರೆ ಸಂದರ್ಭದಲ್ಲಿ ವಿಪರೀತ ನೂಕುನುಗ್ಗಲಿನಲ್ಲಿ ತಮ್ಮ ದೇಹವನ್ನು ಅನುಚಿತವಾಗಿ ಪುರುಷರು ಮುಟ್ಟಿದ್ದಾರೆ. ಹಜ್ ಯಾತ್ರೆ ವೇಳೆ ಮಹಿಳೆಯರು ಹಿಜಾಬ್ ಧರಿಸುವುದು ಉತ್ತಮ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com