ಬ್ರಿಟನ್ ಕಾನೂನು ಹೋರಾಟದಲ್ಲಿ ಸೋತ ವಿಜಯ್ ಮಲ್ಯ, 90 ಮಿಲಿಯನ್ ಡಾಲರ್ ಪಾವತಿಸಬೇಕು

ಮದ್ಯದ ದೊರೆ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಶರ್ ಏರ್ ಲೈನ್ಸ್ ಕಾನೂನು ಹೋರಾಟದಲ್ಲಿ ಹಿನ್ನೆಡೆಯಾಗಿದ್ದು, ಸಿಂಗಾಪುರ ಮೂಲದ...
ವಿಜಯ್ ಮಲ್ಯ
ವಿಜಯ್ ಮಲ್ಯ
ಲಂಡನ್/ಸಿಂಗಾಪುರ: ಮದ್ಯದ ದೊರೆ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಶರ್ ಏರ್ ಲೈನ್ಸ್ ಕಾನೂನು ಹೋರಾಟದಲ್ಲಿ ಹಿನ್ನೆಡೆಯಾಗಿದ್ದು, ಸಿಂಗಾಪುರ ಮೂಲದ ಬಿಒಸಿ ಏವಿಯೇಷನ್ ಗೆ 90 ಮಿಲಿಯನ್ ಡಾಲರ್ ಪಾವತಿಸುವಂತೆ ಲಂಡನ್ ಕೋರ್ಟ್ ಸೋಮವಾರ ಆದೇಶಿಸಿದೆ.
ನಾಲ್ಕು ವಿಮಾನಗಳ ಲೀಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಭದ್ರತಾ ಠೇವಣಿ ನೀಡಲು ವಿಫಲವಾಗಿದ್ದ ಕಿಂಗ್ ಫಿಶರ್ ವಿರುದ್ಧ ಬಿಒಸಿ ಏವಿಯೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವ್ಯವಹಾರ ಮತ್ತು ಆಸ್ತಿ ನ್ಯಾಯಾಲಯಗಳ ಲಂಡನ್ ಹೈಕೋರ್ಟ್ ನ್ಯಾಯಾಧೀಶ ಪಿಕೆನ್ ಅವರು, ಬಾಕಿ ಮೊತ್ತ ಹಾಗೂ ಅದಕ್ಕೆ ಬಡ್ಡಿ ಮತ್ತು ಕಾನೂನೂ ವೆಚ್ಚ ಸೇರಿದಂತೆ 90 ಮಿಲಿಯನ್ ಡಾಲರ್ ಪಾವತಿಸುವಂತೆ ಫೆಬ್ರವರಿ 5ರಂದು ಈ ತೀರ್ಪು ನೀಡಿದ್ದಾರೆ.
ಈ ಕುರಿತು ಕಿಂಗ್ ಫಿಶರ್ ಏರ್ ಲೈನ್ಸ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಬಿಒಸಿ ಏವಿಯೇಷನ್, ನಾವು ತಿರ್ಪೀನ ಪ್ರತಿಗಾಗಿ ಕಾಯುತ್ತಿದ್ದು, ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com