ಅಮೆರಿಕಾ ಒತ್ತಡಕ್ಕೆ ಮಣಿದ ಪಾಕ್: ಜೆಯುಡಿ ಮತ್ತಿತರ ಉಗ್ರ ಸಂಘಟನೆಗಳಿಗೆ ನಿಷೇಧ

ಅಮೆರಿಕದ ಸತತ ಒತ್ತಡಕ್ಕೆ ಮಣಿದಿರುವ ಪಾಕಿಸ್ಥಾನ ಸದ್ದಿಲ್ಲದೇ ಮುಂಬಯಿ ಉಗ್ರ ದಾಳಿಯಾ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ...
ಹಫೀಜ್ ಸೈಯ್ಯಿದ್
ಹಫೀಜ್ ಸೈಯ್ಯಿದ್
ಇಸ್ಲಮಾಬಾದ್: ಅಮೆರಿಕದ ಸತತ ಒತ್ತಡಕ್ಕೆ ಮಣಿದಿರುವ ಪಾಕಿಸ್ಥಾನ ಸದ್ದಿಲ್ಲದೇ ಮುಂಬಯಿ ಉಗ್ರ ದಾಳಿಯಾ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದಾವಾ ಸಂಘಟನೆಯನ್ನು ನಿಷೇಧಿತ ಉಗ್ರ ಪಟ್ಟಿಗೆ ಸೇರಿಸಲು ನಿರ್ಧರಿಸಿದೆ.
ಮುಂಬಯಿ ದಾಳಿ. ಮಾಸ್ಟರ್ ಮೈಂಡ್ ಹಫೀಜ್ ಸೈಯ್ಯದ್  ನೈತೃತ್ವದ ಜಮಾತ್ ಉದ್ ದವಾ ಸೇರಿದಂತೆ ಇನ್ನಿತರ ಭಯೋತ್ಪದಕ ಸಂಘಟನೆಗಳ ನಿಷೇಧಕ್ಕೆ ಪಾಕಿಸ್ತಾನ ಆದೇಶ ಹೊರಡಿಸಿದೆ.
ಅಮೆರಿಕ ಈ ಹಿಂದೆಯೇ ಪಾಕ್‌ ಮೂಲದ ಜಮಾತ್‌ ಉದ್‌ ದಾವಾ ಸಂಘಟನೆಯನ್ನು ಉಗ್ರ ಪಟ್ಟಿಗೆ ಸೇರಿಸಿ ನಿಷೇಧಿಸಿತ್ತು. ಈಗ ಪಾಕಿಸ್ಥಾನ ಕೂಡ ಜಮಾತ್‌ ಸಂಘಟನೆಯನ್ನು ಉಗ್ರ ಪಟ್ಟಿಗೆ ಸೇರಿಸಿ ನಿಷೇಧ ಹೇರುವ ಮೂಲಕ ಅಮೆರಿಕದ ಕಟ್ಟು ನಿಟ್ಟಿನ ಸೂಚನೆಗೆ ತಕ್ಕಂತೆ ನಡೆದುಕೊಂಡಿದೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 27 ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಯಲ್ಲಿ ಈಗಾಗಲೇ ಇರುವ ಪಾಕ್‌ ಮೂಲದಫ‌ರಾಹ್‌ ಇ ಇನ್ಸಾನಿಯತ್‌ ಫೌಂಡೇಶನ್‌ (ಎಫ್ಐಎಫ್), ಲಷ್ಕರ್‌ ಎ ತಯ್ಯಬ ಮತ್ತು ಹರ್ಕತ್‌ ಉಲ್‌ ಮುಜಾಹಿದೀನ್‌ ಮೊದಲಾದ ಹಲವಾರು ಉಗ್ರ ಸಂಘಟನೆಗೆ ಈಗ ಪಾಕ್‌ ಸರಕಾರದಿಂದ ನಿಷೇಧದ ಬಿಸಿ ಮುಟ್ಟುತ್ತಿದೆ. 
ಉಗ್ರ ನಿಗ್ರಹ ಕಾಯಿದೆ (ಎಟಿಎ) ಗೆ ಮಾಡಿರುವ ತಿದ್ದುಪಡಿಯಿಂದಾಗಿ ಈಗಿನ್ನು ತತ್‌ಕ್ಷಣದಿಂದಲೇ ನಿಷೇಧಿಕ ಉಗ್ರ ಸಂಘಟನೆಗಳ ಆಸ್ತಿಪಾಸ್ತಿಯನ್ನು ಪಾಕ್‌ ಸರ್ಕಾರ ಮುಟ್ಟುಗೋಲು ಹಾಕಲಿದೆ. 
ಉಗ್ರ ನಿಗ್ರಹ ವಿಧೇಯಕಕ್ಕೆ ಅಧ್ಯಕ್ಷ ಮಮ್ಮೂನ್ ಹುಸೇನ್‌ ಕಳೆದ ಶುಕ್ರವಾರವೇ ಅನುಮೋದನೆ ನೀಡಿದ್ದಾರೆ. 1997ರ ಉಗ್ರ ನಿಗ್ರಹ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ಉಗ್ರ ಸಂಘಟನೆಗಳ ನಿಷೇಧಕ್ಕೆ ಆದೇಶ ಹೊರಡಿಸಿದ್ದಾರೆ.
ಪ್ಯಾರಿಸ್ ನಲ್ಲಿ  ನಡೆಯಲಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಸಭೆಗೂ ಮುನ್ನ ಪಾಕ್ ಈ ಉಗ್ರ ಸಂಘಟನೆಗಳ ನಿಷೇಧಕ್ಕೆ ಆದೇಶಿಸಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com