ಸೇನಾ ನೆಲೆ ಧ್ವಂಸಗೊಳಿಸಿ ಐವರು ಭಾರತೀಯ ಯೋಧರ ಹತ್ಯೆ : ಪಾಕಿಸ್ತಾನ ಹೇಳಿಕೆ

ಅಂತಾರಾಷ್ಟ್ರೀಯ ಗಡಿ ರೇಖೆ ತಟ್ಟಪಾಣಿ ವಲಯದಲ್ಲಿ ಭಾರತೀಯ ಸೇನಾ ನೆಲೆಯನ್ನು ಧ್ವಂಸಗೊಳಿಸಿ ಐವರು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಹೇಳಿದೆ.
ಐವರು ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ನೀಡಿರುವ ಚಿತ್ರ
ಐವರು ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ನೀಡಿರುವ ಚಿತ್ರ

 ಇಸ್ಲಾಮಾಬಾದ್ : ಅಂತಾರಾಷ್ಟ್ರೀಯ ಗಡಿ ರೇಖೆ ತಟ್ಟಪಾಣಿ ವಲಯದಲ್ಲಿ ಭಾರತೀಯ ಸೇನಾ ನೆಲೆಯನ್ನು ಧ್ವಂಸಗೊಳಿಸಿ ಐವರು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಹೇಳಿದೆ.

ಭಾರತೀಯ ಸೇನೆ ಕಡೆಯಿಂದ ಬಾಂಬು ದಾಳಿ ನಡೆಸುತ್ತಿರುವಂತಹ ವಿಡಿಯೋವೊಂದನ್ನು ಪಾಕಿಸ್ತಾನ ಸೇನೆಯ ವಕ್ತಾರ ಮೇಜರ್ ಜನರಲ್ ಅಸಿಪ್ ಘಪೊರ್  ಟ್ವಿಟ್  ಮಾಡಿದ್ದಾನೆ.

 ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಮುಗ್ದ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಭಾರತೀಯ ಸೇನಾ ನೆಲೆಯನ್ನು ಧ್ವಂಸಗೊಳಿಸಲಾಗಿದೆ. ಐವರು ಭಾರತೀಯ ಯೋಧರನ್ನು ಹತ್ಯೆಗೈಯಲಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಮುಗ್ದ ಜನರ ಭಾರತ ದಾಳಿ ನಡೆಸುತ್ತಿದ್ದು, ಕೂಡಲೇ ಪ್ರತಿಕ್ರಿಯಿಸಬೇಕೆಂದು ಘಪೊರ್  ಹೇಳಿಕೆ ನೀಡಿದ್ದಾನೆ.

ಇದನ್ನು  ಭಾರತೀಯ ಸೇನಾ ಅಧಿಕಾರಿಗಳು ನಿರಾಕರಿಸಿದ್ದಾರೆ. ಪಾಕಿಸ್ತಾನ ನೀಡಿರುವ ಹೇಳಿಕೆ  ಆಧಾರರಹಿತವಾದದ್ದು ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ  ಅಪ್ರಚೋದಿಕತ ಗುಂಡಿನ ದಾಳಿಯನ್ನು ಖಂಡಿಸಿ ಭಾರತದ ಹೈ ಕಮಿಷನರ್ ಗೆ ಪಾಕಿಸ್ತಾನ ನಿನ್ನೆ ನೋಟಿಸ್ ಜಾರಿಗೊಳಿಸಿದೆ. ಭಟ್ಟಳ್- ಮದಾರ್ ಪುರ ರಸ್ತೆಯಲ್ಲಿ ಶಾಲಾ  ವ್ಯಾನಿನ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು,  ವ್ಯಾನಿನ ಚಾಲಕ ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನ ಆರೋಪಿಸಿತ್ತು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com