ನೈಜೀರಿಯಾ: ಬೊಕೊ ಹರಾಮ್ ಉಗ್ರರ ಆತ್ಮಹತ್ಯಾ ಬಾಂಬ್ ದಾಳಿ, 19 ಸಾವು

ಈಶಾನ್ಯ ನೈಜೀರಿಯಾದ ಮೀನು ಮಾರುಕಟ್ಟೆಯಲ್ಲಿ ಮೂರು ಆತ್ಮಹತ್ಯಾ ಬಾಂಬರ್ ಗಳು 19 ಜನರನ್ನು ಹತ್ಯೆ ಮಾಡಿದ್ದಾರೆ.
ನೈಜೀರಿಯಾ: ಬೊಕೊ ಹರಾಮ್ ಉಗ್ರರ ಆತ್ಮಹತ್ಯಾ ಬಾಂಬ್ ದಾಳಿ, 19 ಸಾವು
ನೈಜೀರಿಯಾ: ಬೊಕೊ ಹರಾಮ್ ಉಗ್ರರ ಆತ್ಮಹತ್ಯಾ ಬಾಂಬ್ ದಾಳಿ, 19 ಸಾವು
Updated on
ಕಾನೋ (ನೈಜೀರಿಯಾ): ಈಶಾನ್ಯ ನೈಜೀರಿಯಾದ ಮೀನು ಮಾರುಕಟ್ಟೆಯಲ್ಲಿ ಮೂರು ಆತ್ಮಹತ್ಯಾ ಬಾಂಬರ್ ಗಳು 19 ಜನರನ್ನು ಹತ್ಯೆ ಮಾಡಿದ್ದಾರೆ. ಬೊಕೊ ಹರಾಮ್ ಜಿಹಾದಿಗಳ ಗುಂಪಿಗೆ ಸೇರಿದ್ದವರು ನಡೆಸಿದ ದಾಳಿಯಲ್ಲಿ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಮಿಲಿಟಿಯ ನಾಯಕರು ಹೇಳಿದರು.
ಅಲ್ಲಿನ ಕಾಲಮಾನದಂತೆ ಶುಕ್ರವಾರ ರಾತ್ರಿ 8:30ಕ್ಕೆ ಈ ಸ್ಪೋಟ ಸಂಭವಿಸಿದೆ. ಬೊರ್ನೊ ರಾಜ್ಯದ ರಾಜಧಾನಿ ಮೈಗುಗುರಿಯ ಆಗ್ನೇಯಕ್ಕೆ ಸುಮಾರು 35 ಕಿಲೋಮೀಟರ್ (20 ಮೈಲುಗಳು) ದೂರದ ಕೊಂಡುಗದಲ್ಲಿನಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಸ್ಪೋಟ ಸಂಬವಿಸಿದೆ. ಬಾಬ್ ಸ್ಪೋಟ ನಡೆಸಿದ್ದ ಉಗ್ರರೆಲ್ಲರೂ ಪುರುಷರಾಗಿದ್ದರೆಂದು ಟಾಸ್ಕ್ ಫೋರ್ಸ್ ಅಧಿಕಾರಿಗಳು ಹೇಳಿದ್ದಾರೆ.
"ಒಟ್ಟು 19 ಮಂದಿ ಸತ್ತು 70 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ಉಗ್ರರು ತಶಾನ್ ಕಿಫಿ ಮೀನು ಮಾರುಕಟ್ಟೆಯಲ್ಲಿ  ಆಕ್ರಮಣ ನಡೆಸಿದ್ದರು. ನಾಲ್ಕು ನಿಮಿಷಗಳ ಅಂತರದಲ್ಲಿ ಸಮೀಪದಲ್ಲೇ ಮೂರನೇ ಬಾಂಬರ್ ದಾಳಿ ನಡೆಸಿದ್ದನು"  ನಾಗರಿಕ ಜಂಟಿ ಕಾರ್ಯಪಡೆಯ ಅಧಿಕಾರಿ ಬಾಬಕುರಾ ಕೊಲೊ ಹೇಳಿದ್ದಾರೆ. ಘಟನೆಯಲ್ಲಿ 18 ನಾಗರಿಕರು ಹಾಗೂ ಓರ್ವ ಸೈನಿಕ ಮೃತಪಟ್ಟಿದ್ದಾರೆ ಎಂದು ಅವರು ಹೇಲಿದರು.
ಬೊರ್ನೊ ರಾಜ್ಯದಲ್ಲಿ ಮಿಲಿಟರಿ ಅಥವಾ ಪೋಲೀಸರ ತುರ್ತು ಕಾರ್ಯಾಚರಣೆ ಪಡೆ ಇರದಿದ್ದದ್ದು , ಇದು ಬೊಕೊ ಹರಾಮ್ ನ ಉಗ್ರವಾದಿಗಳಿಗೆ ಅನುಕೂಲಕರವಾಗಿತ್ತು. 2009ರಿಂದ ಈಚೆಗೆ ಬೋಡೋ ಉಗ್ರರಿಂದಾಗಿ ಕನಿಷ್ಠ 20,000 ಜನರು ಕೊಲ್ಲಲ್ಪಟ್ಟಿದ್ದಾರೆ ಮತ್ತು 2.6 ದಶಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.  ಸರ್ಕಾರ ಹಾಗೂ ಮಿಲಿಟರಿ ಇದರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದರೂ ಆತ್ಮಹತ್ಯಾ ಬಾಂಬ್ ದಾಲಿಗಲಂತಹಾ ಪ್ರಕರಣಗಳು ಇವರ ಕೈ ಮೀರಿ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com