ಉಗ್ರರಿಗೆ ಹಣ ಒದಗಿಸುವ ಪಾಕಿಸ್ತಾನ ಕಪ್ಪು ಪಟ್ಟಿಗೆ ಸೇರಿಸಬೇಕು: ಎಫ್ಎಟಿಎಫ್

ಭಯೋತ್ಪಾದನೆಗೆ ಹಣ ಒದಗಿಸುವುದಕ್ಕೆ ಪಾಕಿಸ್ತಾನವನ್ನು ಕಪ್ಪುಪಟ್ಟಿಯಲ್ಲಿ ಸೇರಿಸಲು ಹಣಕಾಸು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್: ಭಯೋತ್ಪಾದನೆಗೆ ಹಣ ಒದಗಿಸುವುದಕ್ಕೆ ಪಾಕಿಸ್ತಾನವನ್ನು ಕಪ್ಪುಪಟ್ಟಿಯಲ್ಲಿ ಸೇರಿಸಲು ಹಣಕಾಸು ಕಾರ್ಯಪಡೆ(ಎಫ್ಎಟಿಎಫ್) ತೀರ್ಮಾನ ಕೈಗೊಂಡಿದೆ.

ಈ ನಿರ್ಧಾರವನ್ನು ಅಮೆರಿಕ ತೆಗೆದುಕೊಂಡಿದ್ದು ಅದಕ್ಕೆ ಇಂಗ್ಲೆಂಡ್, ಫ್ರಾನ್ಸ್ ಮತ್ತು ಭಾರತಗಳು ಬೆಂಬಲ ಸೂಚಿಸಿವೆ.

ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸುವುದಕ್ಕೆ ತನ್ನ ಆಕ್ಷೇಪವನ್ನು ಅದರ ಹಳೆಯ ಸಾಂಪ್ರದಾಯಿಕ ಮಿತ್ರ ಚೀನಾ ಹಿಂತೆಗೆದುಕೊಂಡಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಹಲವು ದೇಶಗಳ ಈ ನಡೆಯಿಂದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಪಾಕಿಸ್ತಾನ ಜೊತೆಗೆ ವ್ಯವಹರಿಸುವುದಕ್ಕೆ ಕಷ್ಟವಾಗಿದೆ. ಅಲ್ಲದೆ ಪಾಕಿಸ್ತಾನದ ಉದ್ಯಮಿಗಳಿಗೆ ಸಾಗರೋತ್ತರದಲ್ಲಿ ವ್ಯವಹಾರ ನಡೆಸಲು ಕೂಡ ಕಷ್ಟವಾಗಿದೆ.

ಭಯೋತ್ಪಾದನೆಗೆ ಹಣ ಒದಗಿಸುವ ಕಾವಲುಪಟ್ಟಿಗೆ ಸೇರಿಸುವುದರಿಂದ ಮೂರು ತಿಂಗಳ ತಡೆ ತನಗೆ ಸಿಕ್ಕಿದೆ ಎಂದು ಪಾಕಿಸ್ತಾನ ಈ ಹಿಂದೆ ತಿಳಿಸಿತ್ತು. ಕಳೆದ ಮಂಗಳವಾರ ಟ್ವೀಟ್ ಮಾಡಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಖವಜ ಆಸಿಫ್, ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಪಾಕಿಸ್ತಾನವನ್ನು ಬೂದುಬಣ್ಣದ ಪಟ್ಟಿಯಿಂದ ಹೊರಗಿರಿಸಲು ತೀರ್ಮಾನಿಸಲಾಗಿದೆ.

ಪಾಕಿಸ್ತಾನವನ್ನು ಬೂದುಪಟ್ಟಿಗೆ ಸೇರಿಸುವ ನಾಮ ಪ್ರಕ್ರಿಯೆಗೆ ಸಹಮತ ಸಿಕ್ಕಿಲ್ಲ. ಇದರಿಂದಾಗಿ ಮೂರು ತಿಂಗಳು ತಡೆಹಿಡಿಯಲಾಗಿದ್ದು ಮುಂದಿನ ಜೂನ್ ಒಳಗೆ ಮತ್ತೊಂದು ವರದಿ ನೀಡುವಂತೆ ಏಷ್ಯಾ ಫೆಸಿಫಿಕ್ ಗುಂಪಿಗೆ ತಿಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.
ಅವರು ಈ ಪೋಸ್ಟ್ ನ್ನು ಟ್ವೀಟ್ ಮಾಡುವಾಗ ಮಾಸ್ಕೊದಲ್ಲಿ ಇದ್ದರು.

1989ರಲ್ಲಿ ಸ್ಥಾಪನೆಗೊಂಡ ಅಂತರಸರ್ಕಾರ ಸಂಘಟನೆ ಪ್ಯಾರಿಸ್ ಮೂಲದ ಎಫ್ಎಟಿಎಫ್, ದೇಶ ದೇಶಗಳ ನಡುವೆ ಅಕ್ರಮ ಹಣ ವರ್ಗಾವಣೆಯನ್ನು ತಡೆಯಲು ನೀತಿ ರೂಪಿಸುವ ಸಂಘಟನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com