ಪಾಕ್ ಸಚಿವನಿಗೆ 100 ಮಿಲಿಯನ್ 'ಮಾನಹಾನಿ' ನೋಟಿಸ್ ನೀಡಿದ ಹಫೀಜ್ ಸಯೀದ್

ಪಾಕಿಸ್ತಾನ ರಕ್ಷಣಾ ಸಚಿವರಿಗೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜಾಮಾತ್ ಉದ್ ದಾವಾ(ಜೆಯುಡಿ) ಉಗ್ರ ಸಂಘಟನೆಯ....
ಹಫೀಜ್ ಸಯೀದ್
ಹಫೀಜ್ ಸಯೀದ್
ಇಸ್ಲಾಮಾಬಾದ್: ಪಾಕಿಸ್ತಾನ ರಕ್ಷಣಾ ಸಚಿವರಿಗೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜಾಮಾತ್ ಉದ್ ದಾವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ 100 ಮಿಲಿಯನ್ ಮಾನಹಾನಿ ನೋಟಿಸ್ ನೀಡಿದ್ದಾನೆ.
ಉಗ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕ್ ಸರ್ಕಾರ ಜೆಯುಡಿ ದೇಣಿಗೆ ಸಂಗ್ರಹಕ್ಕೆ ನಿಷೇಧ ಹೇರಿತ್ತು.
ಹಫೀಜ್ ಸಯೀದ್ ತನ್ನ ವಕೀಲ ಎಕೆ ದೋಗರ್ ಮೂಲಕ ಪಾಕ್ ರಕ್ಷಣಾ ಸಚಿವ ಖುರ್ರಮ್ ದಸ್ತಗಿರ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದು, ಮುಂದಿನ 14 ದಿನಗಳಲ್ಲಿ ಅದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಕ್ಷಮೆ ಕೇಳುವಂತೆ ಹಾಗೂ ಭವಿಷ್ಯದಲ್ಲಿ ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಪಿಪಿಸಿ ಸೆಕ್ಷನ್ 500ರಡಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಜೆಯುಡಿ ಮತ್ತು ಫಲಾಹ್-ಐ-ಇನ್ಸಾನಿಯತ್ ಫೌಂಡೇಶನ್ ಹಾಗೂ ಇತರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕ್ ರಕ್ಷಣಾ ಸಚಿವ ದಸ್ತಗಿರ್ ಅವರು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com