ಆಸಿಯಾನ್ ರಾಷ್ಟ್ರಗಳೊಡನೆ ತನ್ನ ಸಂಪರ್ಕವನ್ನು ವಿಸ್ತರಿಸಲು ಭಾರತ ಯೋಜಿಸಿದೆ: ಸುಷ್ಮಾ ಸ್ವರಾಜ್

ಭಾರತದಿಂದ ಥಾಯ್ ಲ್ಯಾಂಡ್ ಗೆ ತ್ರಿಪಕ್ಷೀಯ ಹೆದ್ದಾರಿ ಯೋಜನೆಯು ಗಣನೀಯ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ .....
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ಸಿಂಗಾಪುರ: ಭಾರತದಿಂದ ಥಾಯ್ ಲ್ಯಾಂಡ್ ಗೆ ತ್ರಿಪಕ್ಷೀಯ ಹೆದ್ದಾರಿ (ಭಾರತ-ಮಯನ್ಮಾರ್-ಥಾಯ್ ಲ್ಯಾಂಡ್ ಹೆದ್ದಾರಿ ಯೋಜನೆ) ಯೋಜನೆಯು ಗಣನೀಯ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಇತರ ಆಸಿಯಾನ್  ರಾಷ್ಟ್ರಗಳೊಂದಿಗೆ ತನ್ನ ಸಂಪರ್ಕವನ್ನು ವಿಸ್ತರಿಸಲು ಭಾರತ ಯೋಜಿಸಿದೆ ಎಂದು ಅವರು ಹೇಳಿದರು.
ಸಿಂಗಪುರದಲ್ಲಿ ಪ್ರಾದೇಶಿಕ ಪ್ರವಾಸಿ ಭಾರತೀಯ ದಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸುಷ್ಮಾ ಸ್ವರಾಜ್ ಜಾಗತಿಕವಾಗಿ ಆಗ್ನೇಯ ಏಷ್ಯಾದ ರಾಷ್ಟ್ರಗಳು ಪರಸ್ಪರ ಸಹಕಾರದೊಡನೆ ಉನ್ನತಿಯತ್ತ ಸಾಗುತ್ತಿದೆ. ಇಂತಹಾ ಅಭಿವೃದ್ದಿ ಕಾರ್ಯಗಳಲ್ಲಿ ಆಸಿಯಾನ್ ರಾಷ್ಟ್ರಗಳ ಪಾಲು ಮಹತ್ವದ್ದಾಗಿದೆ.
"ಇಂದು 16 ಭಾರತೀಯ ನಗರಗಳು ಸಿಂಗಾಪುರದೊಡನೆ ಸಂಪರ್ಕ ಹೊಂದಿವೆ, ಭಾರತದಿಂದ ಥಾಯ್ ಲ್ಯಾಂಡ್ ಗೆ ತ್ರಿಪಕ್ಷೀಯ ಹೆದ್ದಾರಿ ಯೋಜನೆ ಪ್ರಗತಿಯಲ್ಲಿದ್ದು ಇತರ ಆಸಿಯಾನ್ ರಾಷ್ಟ್ರಗಳೊಂದಿಗೆ ಭಾರತವನ್ನು ಸಂಪರ್ಕಿಸಲು ನಾವು ಇದನ್ನು ಮತ್ತಷ್ಟು ವಿಸ್ತರಿಸಲು ಯೋಜಿಸುತ್ತೇವೆ" ಸ್ವರಾಜ್ ಹೇಳಿದರು.
ಭಾರತ ಮತ್ತು ಆಗ್ನೇಯ ಏಷ್ಯಾ ನಡುವಿನ ನಿರ್ಣಾಯಕ ಕ್ಷೇತ್ರಗಳ ಸಹಕಾರದಲ್ಲಿ ಇನ್ನಷ್ಟು ಮಹತ್ವದ ಬೆಳವಣಿಗೆಗಳಾಗಲಿದೆ ಎನ್ನುವ ಭರವಸೆಯನ್ನು ಸುಷ್ಮಾ ಸ್ವರಾಜ್ ವ್ಯಕ್ತಪಡಿಸಿದ್ದಾರೆ.
"ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ಭವಿಷ್ಯವು ಅನೇಕ ಸಾಧ್ಯತೆ ಮತ್ತು ಅಪಾರ ಜವಾಬ್ದಾರಿಯಿಂದ ಕೂಡಿದೆ. ಆಗ್ನೇಯ ಏಷ್ಯಾದೊಂದಿಗೆ ಈಶಾನ್ಯ ಭಾಗವು ಉತ್ತಮ ಸಂಬಂಧ ಹೊಂದಿದಾಗಆಗ್ನೇಯ ಏಷ್ಯಾ ರಾಷ್ಟ್ರಗಳು ಇನ್ನಷ್ಟು ಪ್ರಗತಿ ಕಾಣುತ್ತವೆ" ಅವರು ಹೇಳಿದ್ದಾರೆ.
ಆ ಪ್ರದೇಶದಲ್ಲಿನ ಸಾಮಾನ್ಯ ಸವಾಲುಗಳನ್ನು ಎದುರಿಸಲು ತಯಾರಿ ನಡೆಸಬೇಕಿದೆ,  ಡಿಜಿಟಲ್ ದಿನಗಳಲ್ಲಿ ಕೌಶಲ್ಯಗಳನ್ನು ಸೃಷ್ಟಿಸುವುದು, ಕಠಿಣ ಪರಿಸ್ಥಿತಿಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು, ತ್ವರಿತ ನಗರೀಕರಣದ ಅಗತ್ಯವನ್ನು ಪೂರೈಸುವುದು, ಜೈವಿಕ ವೈವಿಧ್ಯತೆಯನ್ನು ರಕ್ಷಿಸುವುದು, ಶಕ್ತಿಯ ಮೂಲಗಳನ್ನು ರೂಪಿಸುವುದು ಅಗತ್ಯವೆಂದು ಅವರು ಒತ್ತಿಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com