ಬ್ರಿಟನ್ ಸಂಸತ್ತಿನಲ್ಲಿ ಆನ್ ಲೈನ್ ಪೋರ್ನ್ ಗೆ ಪ್ರತಿನಿತ್ಯ160 ಪ್ರಯತ್ನ!

ಬ್ರಿಟನ್ ಸಂಸತ್ತಿನ ಒಳಗೆ ಸಂಸದರು ಕಂಪ್ಯೂಟರ್ ಗಳಲ್ಲಿ ಪೊರ್ನೋಗ್ರಫಿ ವೆಬ್ ಸೈಟ್...
ಬ್ರಿಟನ್ ಸಂಸತ್ತು
ಬ್ರಿಟನ್ ಸಂಸತ್ತು
ಲಂಡನ್: ಬ್ರಿಟನ್ ಸಂಸತ್ತಿನ ಒಳಗೆ ಸಂಸದರು ಕಂಪ್ಯೂಟರ್ ಗಳಲ್ಲಿ ಪೊರ್ನೋಗ್ರಫಿ ವೆಬ್ ಸೈಟ್(ಅಶ್ಲೀಲ ವೆಬ್ ಸೈಟ್ ಗಳು) ದೊರಕುವಂತೆ ಮಾಡಲು 2017ರ ಕೊನೆಯ ವೇಳೆಗೆ ನಿತ್ಯ ಸುಮಾರು 160 ಮನವಿಗಳನ್ನು ಸಲ್ಲಿಸುತ್ತಿದ್ದರು ಎಂಬ ಆತಂಕಕಾರಿ ಅಂಕಿಅಂಶವನ್ನು ಬ್ರಿಟನ್ ನ ಪ್ರೆಸ್ ಅಸೋಸಿಯೇಷನ್ ವರದಿ ಮಾಡಿದೆ.
ಕಳೆದ ಜೂನ್ ನಲ್ಲಿ ಬ್ರಿಟನ್ ಸಂಸತ್ ಚುನಾವಣೆಯ ನಂತರ ಸಂಸತ್ತಿನ ನೆಟ್ ವರ್ಕ್ ಗೆ ಸಂಪರ್ಕಿಸಿದ ಸಾಧನ ಮೂಲಕ ಒಟ್ಟು 24,473 ಬಾರಿ ಪೋರ್ನ್ ವಿಡಿಯೊಗಳಿಗೆ ಮನವಿಗಳು ಬಂದಿವೆ ಎಂದು ಪ್ರೆಸ್ ಅಸೋಸಿಯೇಷನ್ ಗೆ ಸಿಕ್ಕಿರುವ ಅಂಕಿಅಂಶದಿಂದ ತಿಳಿದುಬಂದಿದೆ.
ಪ್ರಧಾನ ಮಂತ್ರಿ ತೆರೆಸಾ ಮೇ ಅವರ ಸಚಿವ ಸಂಪುಟ ಲೈಂಗಿಕ ದುರುಪಯೋಗ ಆರೋಪವನ್ನು ಎದುರಿಸುತ್ತಿದೆ. 2008ರಲ್ಲಿ ತಮ್ಮ ವೆಸ್ಟ್ ಮಿನ್ಸ್ಟರ್ ಕಚೇರಿಯಲ್ಲಿರುವ ಕಂಪ್ಯೂಟರ್ ನಲ್ಲಿ ಪೊರ್ನೊಗ್ರಫಿ ಕಂಡುಬಂದಿತ್ತು ಎಂಬ ಪೊಲೀಸರ ಆರೋಪದದ ಹಿನ್ನೆಲೆಯಲ್ಲಿ ಅವರ ತನಿಖೆಯ ಹಾದಿತಪ್ಪಿಸಲು ಯತ್ನಿಸಿದ ತಮ್ಮ ದೀರ್ಘಕಾಲದ ಸ್ನೇಹಿತ ಹಾಗೂ ಸಂಪುಟ ಸಚಿವ ದಮಿಯಾನ್ ಗ್ರೀನ್ ಅವರನ್ನು ಸಚಿವ ಸ್ಥಾನದಿಂದ ಒತ್ತಾಯಪೂರ್ವಕವಾಗಿ ತೆರೆಸಾ ಮೇಯವರು ತೆಗೆದುಹಾಕಬೇಕಾಗಿಬಂತು.
ಬ್ರಿಟನ್ ಸಂಸತ್ತಿನ ಇಂಟರ್ ನೆಟ್ ಜಾಲವನ್ನು ಕೆಳಮನೆಯ ಸಂಸದರು, ಮೇಲ್ಮನೆಯ ಸದಸ್ಯರಾದ ಲಾರ್ಡ್ಸ್ ಮತ್ತು ಅವರ ಕಚೇರಿ ಸಿಬ್ಬಂದಿ ಬಳಸುತ್ತಾರೆ.
ಪೊರ್ನೊಗ್ರಫಿ ವಿಡಿಯೊಗಳಿಗೆ ಬರುತ್ತಿದ್ದ ಹೆಚ್ಚಿನ ಮನವಿಗಳು ಉದ್ದೇಶಪೂರ್ವಕವಾಗಿರಲಿಲ್ಲ ಮತ್ತು ಇತ್ತೀಚಿನ ವರ್ಷಗಳಲ್ಲಿ ಆ ಪ್ರವೃತ್ತಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
2016ರಲ್ಲಿ ಬ್ರಿಟನ್ ಸಂಸತ್ತು ಇಂತಹ 1,13,208 ಮನವಿಗಳನ್ನು ಬ್ಲಾಕ್(ತಡೆಹಿಡಿಯು) ಮಾಡಿದ್ದು, 2015ರಲ್ಲಿ ಈ ಸಂಖ್ಯೆ 2,13,020ಯಾಗಿತ್ತು.
ಎಲ್ಲಾ ಪೊರ್ನೋಗ್ರಫಿ ವೆಬ್ ಸೈಟ್ ಗಳನ್ನು ಸಂಸತ್ತಿನ ಕಂಪ್ಯೂಟರ್ ನೆಟ್ ವರ್ಕ್ ನಿಂದ ತಡೆಹಿಡಿಯಲಾಗಿದೆ ಎಂದು ಸಂಸತ್ತಿನ ವಕ್ತಾರರು ಪ್ರೆಸ್ ಅಸೋಸಿಯೇಟ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com