ಹಫೀಜ್ ಸಯೀದ್ 1990ರಲ್ಲಿ ಬ್ರಿಟನ್ ನಲ್ಲಿ ಜಿಹಾದ್ ಗೆ ಪ್ರಚೋದನೆ ನೀಡಿದ್ದ: ಬಿಬಿಸಿ

ಮುಂಬೈ ದಾಳಿಯ ರೂವಾರಿ ಹಾಗೂ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ 1990ರಲ್ಲಿ ಜಿಹಾದ್....
ಹಫೀಜ್ ಸಯೀದ್
ಹಫೀಜ್ ಸಯೀದ್
ಲಂಡನ್: ಮುಂಬೈ ದಾಳಿಯ ರೂವಾರಿ ಹಾಗೂ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ 1990ರಲ್ಲಿ ಜಿಹಾದ್ ಘೋಷಿಸುವಂತೆ ಬ್ರಿಟನ್ ಮುಸ್ಲಿಮರಿಗೆ ಪ್ರಚೋದನೆ ನೀಡಿದ್ದ ಎಂದು ಬಿಬಿಸಿ ವರದಿ ಮಾಡಿದೆ.
ಬಿಬಿಸಿ ತನಿಖೆ ಪ್ರಕಾರ, ವಿಶ್ವದ ಮೊಸ್ಟ್ ವಾಂಟೆಡ್ ಉಗ್ರ ಹಫೀಜ್ ಸಯೀದ್ 1995ರಲ್ಲಿ ಜಿಹಾದ್ ಸಾರುವಂತೆ ಬ್ರಿಟಿಷ್ ಮಸೀದಿಗಳಿಗೆ ಪ್ರಚೋದನೆ ನೀಡಿದ್ದ ಮತ್ತು ಈ ಸಂಬಂಧ ಆತ ಮಸೀದಿಗಳಿಗೆ ಭೇಟಿ ನೀಡಿದನ್ನು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ನಿಯತಕಾಲಿಕೆಯಲ್ಲಿ ದಾಖಲಿಸಲಾಗಿದೆ.
ಸದ್ಯ ಪಾಕಿಸ್ತಾನದಲ್ಲಿ ಜಮಾತ್ ಉದ್ ದಾವಾ ಉಗ್ರ ಸಂಘನೆಯ ಮುಖ್ಯಸ್ಥನಾಗಿರುವ ಹಫೀಜ್ ಸಯೀದ್ ಲಂಡನ್ ಪ್ರವಾಸದ ವೇಳೆ, ಬರ್ಮಿಂಗ್ ಹ್ಯಾಮ್ ನಲ್ಲಿ ಜಿಹಾದ್ ಗಾಗಿ ಹೋರಾಡಿ ಎಂದು ತನ್ನ ಬೆಂಬಲಿಗರಿಗೆ ಕರೆ ನೀಡಿದ್ದರು.
ಲೀಸೆಸ್ಟರ್ ನಲ್ಲಿ ಸುಮಾರು 4 ಸಾವಿರ ಮುಸ್ಲಿಂ ಯುವಕರು ಭಾಗವಹಿಸಿದ್ದ ಸಮ್ಮೇಳನದಲ್ಲಿ ಹಫೀಜ್ ಸಯೀದ್ ಜಿಹಾದ್ ಕರೆ ನೀಡಿದ್ದ ಎಂದು ಬಿಬಿಸಿ ರೇಡಿಯೊ 4 ನಿನ್ನೆ ರಾತ್ರಿ ಪ್ರಸಾರ ಮಾಡಿ 'ದಿ ಡಾನ್ ಆಫ್ ಬ್ರಿಟಿಷ್ ಜಿಹಾದ್' ಎಂಬ ಸಾಕ್ಷ್ಯಚಿತ್ರದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com