ಇಸ್ರೋ ಉಪಗ್ರಹಗಳ ಉಡಾವಣೆಗೂ ಮುನ್ನ ವಿರೋಧ ವ್ಯಕ್ತಪಡಿಸಿದ್ದ ಪಾಕಿಸ್ತಾನ!

ವಾತಾವರಣದ ಮೇಲೆ ನಿಗಾವಹಿಸುವ ಕಾರ್ಟೋಸ್ಯಾಟ್-2 ಉಪಗ್ರಹ ಸೇರಿದಂತೆ ಇತರ 31 ಉಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆದರೆ ಇದಕ್ಕೂ ಮುನ್ನ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿತ್ತು.
ಪಾಕಿಸ್ತಾನ
ಪಾಕಿಸ್ತಾನ
ಇಸ್ಲಾಮಾಬಾದ್: ವಾತಾವರಣದ ಮೇಲೆ ನಿಗಾವಹಿಸುವ ಕಾರ್ಟೋಸ್ಯಾಟ್-2 ಉಪಗ್ರಹ ಸೇರಿದಂತೆ ಇತರ 31 ಉಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆದರೆ ಇದಕ್ಕೂ ಮುನ್ನ ಪಾಕಿಸ್ತಾನ ಇಸ್ರೋ ಉಪಗ್ರಹಗಳ ಉಡಾವಣೆಗೆ ವಿರೋಧ ವ್ಯಕ್ತಪಡಿಸಿತ್ತು. 
ಮಿಲಿಟರಿ ಹಾಗೂ ನಾಗರಿಕ ವಲಯಕ್ಕೆ ಎರಡಕ್ಕೂ ಉಪಯೋಗವಾಗುವಂತೆ ಉಪಗ್ರಹಗಳನ್ನು ತಯಾರಿಕೆ ಮಾಡಲಾಗಿರುವುದನ್ನು ದ್ವಂದ್ವಮಯವಾಗಿದೆ ಎಂದು ಹೇಳಿರುವ ಪಾಕಿಸ್ತಾನ, ಪ್ರಾದೇಶಿಕ ಕಾರ್ಯತಂತ್ರ ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ ಎಂದು ಪಾಕಿಸ್ತಾನ ಅಪಸ್ವರವೆತ್ತಿದೆ. 
ಮಾಧ್ಯಮಗಳ ವರದಿಪ್ರಕಾರ ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಡಾ.ಮೊಹಮ್ಮದ್ ಫೈಸಲ್ ಈ ಬಗ್ಗೆ ಹೇಳಿಕೆ ನೀಡಿದ್ದು, ದ್ವಂದ್ವ ಲಕ್ಷಣಗಳನ್ನು ಹೊಂದಿರುವ ಉಪಗ್ರಹಗಳಿಂದ ಪ್ರಾದೇಶಿಕ ಕಾರ್ಯತಂತ್ರ ಸ್ಥಿರತೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. 
ಪ್ರತಿ ರಾಷ್ಟ್ರಕ್ಕೂ ಸಹ ಶಾಂತಿಯುತವಾಗಿ ಬಳಕೆಯಾಗುವಂತಹ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಕೆ ಮಾಡುವ ಹಕ್ಕು ಇರುತ್ತದೆ. ಆದರೆ ಪ್ರಾದೇಶಿಕ ಕಾರ್ಯತಂತ್ರ ಸ್ಥಿರತೆ ನಕಾರಾತ್ಮಕ ಪರಿಣಾಮ ಬೀರುವ ಉಪಗ್ರಹಗಳಿಗೆ ನಮ್ಮ ಆಕ್ಷೇಪವಿದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com