ಶೆರಿನ್ ಮ್ಯಾಥ್ಯೂಸ್ ಪ್ರಕರಣ: ದತ್ತು ತಂದೆಯ ವಿರುದ್ಧ ಕೊಲೆ ಆರೋಪ ದಾಖಲು

ಭಾರತೀಯ ಮೂಲದ ಮೂರು ವರ್ಷದ ಶೆರಿನ್ ಮ್ಯಾಥ್ಯೂಸ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತು ತಂದೆ ವೆಸ್ಲಿ ಮ್ಯಾಥ್ಯೂಸ್ ವಿರುದ್ಧ ಕೊಲೆ ಆರೋಪ ದಾಖಲು...
ಶೆರಿನ್ ಮ್ಯಾಥ್ಯೂಸ್-ವೆಸ್ಲಿ ಮ್ಯಾಥ್ಯೂಸ್
ಶೆರಿನ್ ಮ್ಯಾಥ್ಯೂಸ್-ವೆಸ್ಲಿ ಮ್ಯಾಥ್ಯೂಸ್
Updated on
ಡಲ್ಲಾಸ್: ಭಾರತೀಯ ಮೂಲದ ಮೂರು ವರ್ಷದ ಶೆರಿನ್ ಮ್ಯಾಥ್ಯೂಸ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತು ತಂದೆ ವೆಸ್ಲಿ ಮ್ಯಾಥ್ಯೂಸ್ ವಿರುದ್ಧ ಕೊಲೆ ಆರೋಪ ದಾಖಲು ಮಾಡಲಾಗಿದೆ. 
ಕಳೆದ ಅಕ್ಟೋಬರ್ ತಿಂಗಳಲ್ಲಿ ಕಾಣೆಯಾಗಿದ್ದ ಶೆರಿನ್ ಮ್ಯಾಥ್ಯೂಸ್ ಮೃತದೇಹ ಕೆಲ ದಿನಗಳ ನಂತರ ಡಲ್ಲಾಸ್ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯಲ್ಲಿ ಮಗು ಹಿಂಸೆ ಅನುಭವಿಸಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ. 
ಈ ಪ್ರಕರಣಕ್ಕೆ ಸಂಬಂಸಿದಂತೆ ವೆಸ್ಲಿ ಮ್ಯಾಥ್ಯೂಸ್ ವಿರುದ್ಧ ಕೊಲೆ ಆರೋಪ ದಾಖಲಿಸಲಾಗಿದ್ದು ಆರೋಪ ಸಾಬೀತಾದಲ್ಲಿ ವೆಸ್ಲಿಗೆ ಗಲ್ಲು ಶಿಕ್ಷೆ ಅಥವಾ 2ರಿಂದ 20 ವರ್ಷದವರೆಗೆ ಯಾವುದೇ ಪ್ರಮಾಣದ ಶಿಕ್ಷೆಯಾಗಬಹುದು. 
ಮೊದಲಿಗೆ ವೆಸ್ಲಿ ಮಗು ನಾಪತ್ತೆಯಾಗಿದೆ ಎಂದು ಸುಳ್ಳಿನ ಕತೆ ಕಟ್ಟಿದ್ದ. ನಂತರ ಮಗು ಹಾಲು ಕುಡಿಯಲಿಲ್ಲ ಆದ್ದರಿಂದ ಶಿಕ್ಷೆ ನೀಡಲು ಮನೆಯ ಹೊರಗಡೆ ನಿಲ್ಲಿಸಿದ್ದೆ. ಆ ವೇಳೆ ಮಗು ನಾಪತ್ತೆಯಾಗಿದೆ ಎಂದಿದ್ದ ಆತ ನಂತರ ಹಾಲು ಕುಡಿಯುವಾಗ ಅದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಉಸಿರು ಗಟ್ಟಿ ಮಗು ತೀರಿ ಹೋಯಿತು ಎಂದು ಹೇಳಿದ್ದ. 
ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಹಲವು ದಿನಗಳ ಕಾಲ ನಡೆಸಿದ್ದ ಶೋಧ ಕಾರ್ಯದ ನಂತರ ಮನೆಯ ಹತ್ತಿರ ಇರುವ ಚರಂಡಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com