ಬೆನೆಜಿರ್ ಭುಟ್ಟೋ ಹತ್ಯೆಗೆ ಹೊಣೆ ಹೊತ್ತ ತಾಲೀಬಾನ್ ಉಗ್ರ ಸಂಘಟನೆ

2007 ರಲ್ಲಿ ನಡೆದಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್‌ ಭುಟ್ಟೋ ಅವರ ಹತ್ಯೆಗೆ ಈಗ ಪಾಕಿಸ್ತಾನದ ತಾಲೀಬಾನ್ ಸಂಘಟನೆ ಹೊಣೆ ಹೊತ್ತುಕೊಂಡಿದೆ.
ಬೆನೆಜಿರ್ ಭುಟ್ಟೋ
ಬೆನೆಜಿರ್ ಭುಟ್ಟೋ
ನವದೆಹಲಿ: 2007 ರಲ್ಲಿ ನಡೆದಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್‌ ಭುಟ್ಟೋ ಅವರ ಹತ್ಯೆಗೆ ಈಗ ಪಾಕಿಸ್ತಾನದ ತಾಲೀಬಾನ್ ಸಂಘಟನೆ ಹೊಣೆ ಹೊತ್ತುಕೊಂಡಿದೆ. 
ಬೆನಜಿರ್ ಭುಟ್ಟೋ ಅವರನ್ನು 2007 ರ ಡಿ.27 ರಂದು ರಾವಲ್ಪಿಂಡಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಪರ್ವೇಜ್ ಮುಷರಫ್ ನ ಮಿಲಿಟರಿ ಆಡಳಿತದ ಸದಸ್ಯರು ಭುಟ್ಟೋ ಹತ್ಯೆಗೆ ತೆಹ್ರೀಕ್-ಎ-ತಾಲೀಬಾನ್ ಉಗ್ರ ಸಂಘಟನೆಯನ್ನು ದೂಷಿಸಿದ್ದರು. ಆದರೆ ಈ ಬಗ್ಗೆ ಉಗ್ರ ಸಂಘಟನೆಯಾಗಲೀ ಅದರ ಸದಸ್ಯರಾಗಲೀ ಮಾತನಾಡಿರಲಿಲ್ಲ. 
2017 ರ ನವೆಂಬರ್ ನಲ್ಲಿ ಬಿಡುಗಡೆಯಾದ ತಾಲೀಬಾನ್ ಉಗ್ರನ ಪುಸ್ತಕದಲ್ಲಿ ಈ ಬಗ್ಗೆ ಮಾಹಿತಿ ಇದ್ದು, ಬೆನಜಿರ್ ಭುಟ್ಟೋ ಅವರನ್ನು ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ನೀಡಲಾಗಿದ್ದು, ಬಾಂಬರ್ ಬಿಲಾಲ್ ಮೊದಲು ತನ್ನ ಪಿಸ್ತೂಲ್ ನಿಂದ ಬೆನಜಿರ್ ಭುಟ್ಟೋ ಕುತ್ತಿಗೆಗೆ ಫೈರ್ ಮಾಡಿದ. ನಂತರ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಪುಸ್ತಕದಲ್ಲಿ ಬರೆಯಲಾಗಿದೆ. 
ಬೆನಜಿರ್ ಭುಟ್ಟೋ ಹತ್ಯೆಯಾದ ಬೆನ್ನಲ್ಲೇ ಇಬ್ಬರು ತಾಲೀಬಾನ್ ನಾಯಕರ ನಡುವಿನ ಸಂಭಾಷಣೆಯನ್ನು ಮುಷರಫ್ ಆಡಳಿತ ಬಿಡುಗಡೆ ಮಾಡಿತ್ತು. ಈಗ ಪುಸ್ತಕದಲ್ಲಿ ಮಾಹಿತಿ ನೀಡುವ ಮೂಲಕ ತಾಲೀಬಾನ್ ಸಂಘಟನೆ ಬೆಜೆಜಿರ್ ಭುಟ್ಟೋ ಅವರನ್ನು ಹತ್ಯೆ ಮಾಡಿತ್ತು ತಾನೇ ಎಂದು ಒಪ್ಪಿಕೊಂಡಂತಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com