ಟರ್ಕಿ: ಭೀಕರ ಬಸ್ ಅಪಘಾತ, ಹನ್ನೊಂದು ಸಾವು, 46 ಮಂದಿಗೆ ಗಾಯ

ಟರ್ಟಿಯ ಇಂಟರ್ ಸಿಟಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಕಾರಣ ಹನ್ನೊಂದು ಜನ ಸತ್ತು 46 ಮಂದಿ ಗಾಯಗೊಂಡಿದ್ದಾರೆ.
ಟರ್ಕಿಯಲ್ಲಿ ಭೀಕರ ಬಸ್ ಅಪಘಾತ, ಹನ್ನೊಂದು ಸಾವು, 46 ಮಂದಿಗೆ ಗಾಯ
ಟರ್ಕಿಯಲ್ಲಿ ಭೀಕರ ಬಸ್ ಅಪಘಾತ, ಹನ್ನೊಂದು ಸಾವು, 46 ಮಂದಿಗೆ ಗಾಯ
ಸ್ಟಾನ್ ಬುಲ್(ಟರ್ಕಿ): ಟರ್ಟಿಯ ಇಂಟರ್ ಸಿಟಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಕಾರಣ ಹನ್ನೊಂದು ಜನ ಸತ್ತು 46 ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿ ಅಂಕಾರಾದಿಂದ ಪಶ್ಚಿಮ ಭಾಗದಲ್ಲಿರುವ ಬುರ್ಸಾ ನಗರಕ್ಕೆ ರಾತ್ರಿ ಸಂಚರಿಸುವ  ಬಸ್ ಇದಾಗಿದ್ದು ಉತ್ತಮ ರಸ್ತೆ ಮಾರ್ಗವಿದ್ದಲ್ಲಿಯೂ ಈ ಅವಘಡ ಸಂಭವಿಸಿದೆ ಎಂದು ಎಸ್ಕಿಶೈರ್ ಗವರ್ನರ್ ಓಜ್ಡಿಮಿರ್ ಸಕಕಾಕ್ ಡೋಗನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ರಸ್ತೆ ಯಾವುದೇ ಹಿಮ ಅಥವಾ ಮಂಜಿನಿಂದ ಆವೃತವಾಗಿರಲಿಲ್ಲ. ಅಪಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಲಾಗುತ್ತದೆ ಎಂದು ಸಕಕಾಕ್ ಹೇಳಿದ್ದಾರೆ.
ಬಸ್ ನಲ್ಲಿರುವ ಪ್ರಯಾಣಿಕರಲ್ಲಿ ಬಹುತೇಕ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಜನಪ್ರಿಯ ಯುದ್ದಗ್ಯಾಗ್ ಸ್ಕೀ ರೆಸಾರ್ಟ್ ನಲ್ಲಿ ತಂಗುವುದಕ್ಕಾಗಿ ಬುರ್ಸಾಕ್ಕೆ ತೆರಳುತ್ತಿದ್ದರು. ಅಪಘಾತಗೊಂಡ ಬಸ್ ನ ಇಬ್ಬರು ಚಾಲಕರು ಸಹ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಹೇಳಿದೆ.
ಟರ್ಕಿಯಲ್ಲಿ 2016 ರಲ್ಲಿ ಸುಮಾರು ಒಂದು ಮಿಲಿಯನ್ ಅಪಘಾತಗಳು ಸಂಭವಿಸಿದ್ದು 7,300 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com