ಆತ್ಮಾಹುತಿ ಬಾಂಬ್ ದಾಳಿಕೋರರು ಚೆಕ್ ಪೊಸ್ಟ್ ಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ಬಾರಿ ತಮ್ಮ ಕೃತ್ಯಕ್ಕೆ ಆಂಬುಲೆನ್ಸ್ ಬಳಸಿಕೊಂಡಿದ್ದಾರೆ. ಮೊದಲ ಚೆಕ್ ಪೊಸ್ಟ್ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಎರಡನೇ ಚೆಕ್ ಪೊಸ್ಟ್ ನಲ್ಲಿ ಸಿಕ್ಕಿ ಬಿದ್ದಿದ್ದು, ಅಲ್ಲಿಯೇ ಆದನ್ನು ಸ್ಫೋಟಿಸಿದ್ದಾರೆ ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ನಸರತ್ ರಹಿಮ್ ಅವರು ಎಎಫ್ ಪಿಗೆ ತಿಳಿಸಿದ್ದಾರೆ.