ಜಾಕಿರ್ ನಾಯ್ಕ್ ನ್ನು ಭಾರತಕ್ಕೆ ಕಳಿಸುವುದಿಲ್ಲ: ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್

ಇಸ್ಲಾಮ್ ನ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ನ್ನು ಭಾರತಕ್ಕೆ ಕಳಿಸುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಹೇಳಿದ್ದಾರೆ.
ಜಾಕಿರ್ ನಾಯ್ಕ್
ಜಾಕಿರ್ ನಾಯ್ಕ್
ನವದೆಹಲಿ: ಇಸ್ಲಾಮ್ ನ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ನ್ನು ಭಾರತಕ್ಕೆ ಕಳಿಸುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಹೇಳಿದ್ದಾರೆ. 
ಜಾಕಿರ್ ನಾಯ್ಕ್ ನ್ನು ಮಲೇಷ್ಯಾದಿಂದ ಭಾರತಕ್ಕೆ ಗಡಿ ಪಾರು ಮಾಡಲಾಗಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ  ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮ್ಮದ್ ಸ್ಪಷ್ಟನೆ ನೀಡಿದ್ದು ಜಾಕಿರ್ ನಾಯ್ಕ್ ನ್ನು ಭಾರತಕ್ಕೆ ಕಳಿಸುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಜಾಕಿರ್ ನಾಯ್ಕ್ ಭಾರತಕ್ಕೆ ಬರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಿರುದ್ಧ ದಾಖಲಾಗಿರುವ ಸುಳ್ಳು ಮೊಕದ್ದಮೆಗಳು ರದ್ದುಗೊಂಡು ತಾನು ಸೇಫ್ ಎನಿಸುವವರೆಗೂ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿದ್ದರು.  "ನಾನು ಭಾರತಕ್ಕೆ ಬರುವುದರ ಬಗ್ಗೆ ಪ್ರಕಟವಾಗಿರುವ ವರದಿಗಳು ಸುಳ್ಳು, ನನ್ನ ವಿರುದ್ಧ ಅನ್ಯಾಯದ ಪ್ರಕರಣಗಳು ರದ್ದುಗೊಂಡು ಸೇಫ್ ಎನಿಸುವವರೆಗೆ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. 
ಜಾಕಿರ್ ನಾಯ್ಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ, ದ್ವೇಷ ಭಾಷಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಲೇಷ್ಯಾಕ್ಕೆ ತೆರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com