ಕಟ್ಟಾ ಇಸ್ಲಾಂ ರಾಷ್ಟ್ರ ಪಾಕ್ ಚುನಾವಣೆಯಲ್ಲಿ ಹಿಂದೂ ಮಹಿಳೆ ಸ್ಪರ್ಧೆ, ಇತಿಹಾಸ ಸೃಷ್ಟಿ!

ಕಟ್ಟಾ ಇಸ್ಲಾಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಜುಲೈ 25ರಂದು ನಡೆಯಲಿರುವ ಸಂಸದೀಯ ಮತ್ತು ಪ್ರಾಂತೀಯ ಸಭಾ ಚುನಾವಣೆಯಲ್ಲಿ ಹಿಂದೂ ಮಹಿಳೆಯೊಬ್ಬರು...
ಸುನೀತಾ ಪರ್ಮಾರ್
ಸುನೀತಾ ಪರ್ಮಾರ್
ಕರಾಚಿ: ಕಟ್ಟಾ ಇಸ್ಲಾಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಜುಲೈ 25ರಂದು ನಡೆಯಲಿರುವ ಸಂಸದೀಯ ಮತ್ತು ಪ್ರಾಂತೀಯ ಸಭಾ ಚುನಾವಣೆಯಲ್ಲಿ ಹಿಂದೂ ಮಹಿಳೆಯೊಬ್ಬರು ಚುನಾವಣಾ ಕಣಕ್ಕಿಳಿದಿದ್ದು ಇದು ಪಾಕ್ ಚುನಾವಣೆಯಲ್ಲೇ ಮೊದಲು.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಸುನೀತಾ ಪರ್ಮಾರ್ ಕಣಕ್ಕಳಿದಿದ್ದಾರೆ. ಪಾಕ್ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದ ಹಿಂದೂ ಮಹಿಳೆಯೋರ್ವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು. 
ಪಾಕ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದಗಳನ್ನು ಹೊಂದಿರುವ ತಾರ್ಪಾರ್ಕಾರ್ ಜಿಲ್ಲೆಯ ಸಿಂಧ್ ವಿಧಾನಸಭಾ ಕ್ಷೇತ್ರದ ಪಿಎಸ್ 56ಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 
ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಮಾತನಾಡಿರುವ ಸುನೀತಾ 21ನೇ ಶತಮಾನದಲ್ಲೂ ಮಹಿಳೆಯರು ಮೂಲಭೂತ ಆರೋಗ್ಯ ಸೌಲಭ್ಯ ಹಾಗೂ ಶಿಕ್ಷಣಕ್ಕಾಗಿ ತೊಂದೆರ ಅನುಭವಿಸುವಂತಾಗಿದೆ. ಚುನಾವಣೆಯಲ್ಲಿ ಗೆದ್ದು ಉತ್ತಮ ಆಡಳಿತ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com