ಮತ ಗಳಿಕೆಗಾಗಿ ಭಾರತ ಸರ್ಕಾರ ನನ್ನನ್ನು ಸ್ವದೇಶಕ್ಕೆ ಕರೆತರಲು ಪ್ರಯತ್ನಿಸುತ್ತಿದೆ: ವಿಜಯ್ ಮಲ್ಯ

ಬ್ರಿಟನ್ ನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ಜಾರಿ ಆದೆಶ ಹೊರಡಿಸಿದ್ದು, ಅಲ್ಲಿನ ಅಧಿಕಾರಿಗಳಿಗೆ ಸಹಕರಿಸುವುದಾಗಿ ವಿಜಯ್ ಮಲ್ಯ ಹೇಳಿದ್ದಾರೆ.
Indian Government wants to bring me back to win votes: Mallya
Indian Government wants to bring me back to win votes: Mallya
Updated on
ಬ್ರಿಟನ್: ಬ್ರಿಟನ್ ನಲ್ಲಿರುವ ವಿಜಯ್ ಮಲ್ಯ ಅವರ  ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಬ್ರಿಟನ್ ಕೋರ್ಟ್ ಜಾರಿ ಆದೆಶ ಹೊರಡಿಸಿದ್ದು, ಅಲ್ಲಿನ ಅಧಿಕಾರಿಗಳಿಗೆ ಸಹಕರಿಸುವುದಾಗಿ ವಿಜಯ್ ಮಲ್ಯ ಹೇಳಿದ್ದಾರೆ.  ಆದರೆ ಬ್ರಿಟನ್ ನಲ್ಲಿರುವ ಬೆಲೆ ಬಾಳುವ ಆಸ್ತಿಗಳ ಪೈಕಿ ಕೆಲವನ್ನು ಮಲ್ಯ ತಮ್ಮ ಹೆಸರಿನಲ್ಲಿರಿಸಿಕೊಳ್ಳದೇ ಕುಟುಂಬ ಸದಸ್ಯರ ಹೆಸರಿನಲ್ಲಿರಿಸಿದ್ದಾರೆ. 
ಭಾರತದ 13 ಬ್ಯಾಂಕ್ ಗಳ ಸಾಲ ಮರುಪಾವತಿಗಾಗಿ ಬ್ರಿಟನ್ ನಲ್ಲಿರುವ  ವೇಳೆ ಭಾರತ ವಿಜಯ್ ಮಲ್ಯರನ್ನು ಗಡಿಪಾರು ಮಾಡುವಂತೆ ಆಗ್ರಹಿಸುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಮಲ್ಯ ಮತಗಳನ್ನು ಪಡೆಯುವ ಉದ್ದೇಶದಿಂದ ನನ್ನನ್ನು ಬ್ರಿಟನ್ ನಿಂದ ಭಾರತಕ್ಕೆ ವಾಪಸ್ ಕರೆತರಲು ಬಯಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
"ಬ್ರಿಟನ್ ಕೋರ್ಟ್ ಜಾರಿ ಆದೇಶ ಹೊರಡಿಸಿದ್ದು, ಬ್ರಿಟನ್ ನಲ್ಲಿರುವ ನನ್ನ ಆಸ್ತಿಯ ವಿವರಗಳ ಬಗ್ಗೆ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದೇನೆ, ನನ್ನಲ್ಲಿ ಕೆಲವೊಂದು ಕಾರುಗಳು, ಚಿನ್ನಾಭರಣಗಳು, ಇವೆ, ಅದನ್ನು ವಶಕ್ಕೆ ಪಡೆಯಲು ನೀವು ನನ್ನ ಮನೆಗೇ ಬರಬೇಕಿಲ್ಲ, ದಿನಾಂಕ, ಸಮಯ, ಸ್ಥಳವನ್ನು ತಿಳಿಸಿದರೆ ನಾನೇ ಅವುಗಳನ್ನು ವಶಕ್ಕೆ ನೀಡುತ್ತೇನೆ, ನನ್ನ ಹೆಸರಿನಲ್ಲಿರುವ ಆಸ್ತಿಗಳನ್ನು ಮಾತ್ರ ವಶಕ್ಕೆ ಪಡೆಯಬಹುದು, ಅದರಿಂದ ಒಂದಿಂಚೂ ಮುಂದೆ ಹೋಗುವುದಕ್ಕೆ ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಎಂದು ಮಲ್ಯ ಹೇಳಿದ್ದಾರೆ. 
ರಾಜಕೀಯ ಉದ್ದೇಶದಿಂದ ನನ್ನನ್ನು ಬ್ರಿಟನ್ ನಿಂದ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಯತ್ನಿಸಿಉತ್ತಿದೆ, ಚುನಾವಣಾ ವರ್ಷವಾಗಿರುವುದರಿಂದ ಈ ರೀತಿ ಮಾಡಿದರೆ ಮತಗಳು ಹೆಚ್ಚಿಗೆ ಸಿಗುತ್ತವೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ ಎಂದು ಮಲ್ಯ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com