ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ ಒಟ್ಟು 11 ಬಾಲಕರ ರಕ್ಷಣೆ : ಇಂದು ಸುರಕ್ಷಿತವಾಗಿ ಮೂವರು ಹೊರಕ್ಕೆ

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಗುಹೆಯಿಂದ 10 ನೇ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ
 ಬ್ಯಾಂಕಾಕ್: ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಗುಹೆಯಿಂದ ಇಂದು  ಮೂವರು  ಬಾಲಕರನ್ನು ಸುರಕ್ಷಿತವಾಗಿ ಹೊರ ತರಲಾಗಿದ್ದು, ಒಟ್ಟಾರೇ 11 ಬಾಲಕರನ್ನು    ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇಂದು 11, 10 ಹಾಗೂ  9 ನೇ  ಬಾಲಕನನ್ನು  ಸುರಕ್ಷಿತವಾಗಿ ಹೊರಗೆ ತರಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.  12 ನೇ ಬಾಲಕ ಹಾಗೂ ಅವರ ಸೊಕ್ಕರ್ ಕೋಚ್ ಎರಡು ವಾರಗಳಿಂದಲೂ  ನಾಪತ್ತೆಯಾಗಿದ್ದಾರೆ.  13 ಮಂದಿಯನ್ನು  ಸುರಕ್ಷಿತವಾಗಿ ಹೊರಗೆ ತರುವುದಾಗಿ  ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಮಳೆಯ ನೀರಿನಿಂದ ತುಂಬಿದ ಗುಹೆಯಲ್ಲಿ ಸಿಲುಕಿದ 11 ಮಂದಿಯನ್ನು ಈವರೆಗೂ ಸುರಕ್ಷಿತವಾಗಿ ಹೊರಗೆ ತರಲಾಗಿದೆ. ಇವರೆಲ್ಲರೂ 18 ದಿನಗಳಿಂದಲೂ ಗುಹೆಯಲ್ಲಿಯೇ ಸಿಲುಕಿದದ್ದು  ಕಂಡುಬಂದಿದೆ ಎಂದು ಕಾರ್ಯಾಚರಣೆಯ ಮುಖ್ಯಸ್ಥರು ತಿಳಿಸಿದ್ದಾರೆ. ಆದಾಗ್ಯೂ, ಭಾರೀ ಮಳೆಯಿಂದ ಕಾರ್ಯಾಚಾರಣೆ ಮಾರ್ಗ ನೆಲದೊಳಗೆ ಮುಚ್ಚಿದೆ ಎಂಬುದು ತಿಳಿದುಬಂದಿದೆ.
ಉತ್ತರ ಥಾಯ್ಲೆಂಡ್ ನ  ಕಣಿವೆ ಪ್ರದೇಶದಲ್ಲಿ ಇಂದು ಬೆಳಗ್ಗೆಯಿಂದಲೂ ಮಲೆಯಾಗುತ್ತಿದ್ದು, ಉಳಿದಿರುವ  ಇಬ್ಬರನ್ನು  ಮೇಲಕ್ಕೆ ತರುವುದೇ ನಮ್ಮ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದೆರಡು ದಿನಗಳಿಗಿಂತಲೂ ಇಂದು ಕ್ಷಿಪ್ರಗತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ 8 ಬಾಲಕರ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಜ್ವರ ಇಲ್ಲ. ಅವರ ಮಾನಸಿಕ ಸ್ಥಿತಿ ಸೇರಿದಂತೆ ಎಲ್ಲಾವೂ  ಸರಿಯಾಗಿದೆ ಎಂದು  ಸಾರ್ವಜನಿಕ ಆರೋಗ್ಯ ಸಚಿವಾಲದ ಕಾಯಂ ಕಾರ್ಯದರ್ಶಿ ಜೆಡ್ ಸಾದಾ ಚೊಕದಾರ್ಮೊಂಗ್ ಸಕು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com