ಹೆಲಿಕಾಫ್ಟರ್ ನಲ್ಲಿ ಷರೀಫ್, ಮರ್ಯಮ್ ನ್ನು ಜೈಲಿಗೆ ಕರೆದೊಯ್ಯಲಿರುವ ಪಾಕ್ ಅಧಿಕಾರಿಗಳು

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಷರೀಫ್ ಪುತ್ರಿ ಮರ್ಯಮ್ ಪಾಕಿಸ್ತಾನಕ್ಕೆ ಆಗಮಿಸುತ್ತಿದ್ದಂತೆಯೇ ಹೆಲಿಕಾಫ್ಟರ್ ನಲ್ಲಿ
ನವಾಜ್ ಷರೀಫ್
ನವಾಜ್ ಷರೀಫ್
ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಷರೀಫ್ ಪುತ್ರಿ ಮರ್ಯಮ್ ಪಾಕಿಸ್ತಾನಕ್ಕೆ ಆಗಮಿಸುತ್ತಿದ್ದಂತೆಯೇ ಹೆಲಿಕಾಫ್ಟರ್ ನಲ್ಲಿ ಜೈಲಿಗೆ ತೆರಳಲಿದ್ದಾರೆ. 
ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಅವರ ಪುತ್ರಿ ಜೈಲಿಗೆ ತೆರಳಲು ಸಕಲ ವ್ಯವಸ್ಥೆಗಳನ್ನೂ ಮಾಡಿದ್ದು, ಜು.13 ರಂದು ಲಾಹೋರ್ ನಲ್ಲಿರುವ ಅಲ್ಲಂ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಎರಡು ಪ್ರತ್ಯೇಕ ಹೆಲಿಕಾಫ್ಟರ್ ಗಳಲ್ಲಿ ಜೈಲಿಗೆ ಕಳಿಸಲಾಗುತ್ತದೆ. 
ಜಿಯೋ ನ್ಯೂಸ್ ನ ವರದಿಯ ಪ್ರಕಾರ ಕ್ಯಾಬಿನೆಟ್ ವಿಭಾಗ ಎನ್ ಎ ಬಿ ಗೆ  2 ಪ್ರತ್ಯೇಕ ಹೆಲಿಕಾಫ್ಟರ್ ಗಳ ವ್ಯವಸ್ಥೆಯನ್ನು ಮಾಡಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ನವಾಜ್ ಷರೀಫ್ ಹಾಗೂ ಮರ್ಯಮ್ ಇಬ್ಬರನ್ನೂ ನೇರವಾಗಿ ರಾವಲ್ಪಿಂಡಿಯಲ್ಲಿರುವ ಆಡಿಯಾಲಾ ಜೈಲಿಗೆ ರವಾನೆ ಮಾಡಲಾಗುತ್ತದೆ. 
ವಿಮಾನ ನಿಲ್ದಾಣದಿಂದ ರಾವಲ್ಪಿಂಡಿಗೆ ತೆರಳುವ ವೇಳೆಯಲ್ಲಿ ಷರೀಫ್ ಹಾಗೂ ಮರ್ಯಂ ಜೊತೆ 22 ಎನ್ ಎಬಿಎ ಅಧಿಕಾರಿಗಳು, 100 ಕಮಾಂಡೋಗಳು ಇರಲಿದ್ದಾರೆ.  ಇದೇ ವೇಳೆ ಪಾಕ್ ಮಾಜಿ ಪ್ರಧಾನಿಯ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ತನ್ನ ನಾಯಕನನ್ನು ಸ್ವಾಗತಿಸಲು ಸಜ್ಜುಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com