ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರಿಗೆ ಸ್ಥಾನ

ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕರಾದ ಜಯಶ್ರೀ ಉಲ್ಲಾಳ್ ಹಾಗೂ ನೀರಜಾ ಸೇಥಿ ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರಿಗೆ ಸ್ಥಾನ
ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರಿಗೆ ಸ್ಥಾನ
ವಾಷಿಂಗ್ ಟನ್: ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕರಾದ ಜಯಶ್ರೀ ಉಲ್ಲಾಳ್ ಹಾಗೂ ನೀರಜಾ ಸೇಥಿ ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 
ತಮ್ಮದೇ ಆದ ಸಾಮರ್ಥ್ಯದಿಂದ ಸಾಧನೆ ಮಾಡಿರುವ ಅಮೆರಿಕದ 60 ಶ್ರೀಮಂತ ಮಹಿಳೆಯರ ಪಟ್ಟಿಯನ್ನು ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಈ ಪೈಕಿ ಭಾರತೀಯ ಮೂಲದ ಇಬ್ಬರು ಮಹಿಳೆಯರೂ ಸ್ಥಾನ ಪಡೆದಿದ್ದಾರೆ.  ಇದೇ ವೇಳೆ ಅಮೆರಿಕದ 21 ವರ್ಷದ ರಿಯಾಲಿಟಿ ಸ್ಟಾರ್ ಹಾಗೂ ಉದ್ಯಮಿ  ಕೈಲೀ ಜೆನ್ನರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅತಿ ಕಿರಿಯ ಮಹಿಳೆಯಾಗಿದ್ದಾರೆ. 
1.3 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಜಯಶ್ರೀ ಉಲ್ಲಾಳ್ 18 ನೇ ಸ್ಥಾನದಲ್ಲಿರುವ ಮಹಿಳೆಯಾಗಿದ್ದರೆ, ಒಂದು ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಸೇಥಿ 21 ನೇ ಸ್ಥಾನದಲ್ಲಿದ್ದಾರೆ.  ಫೋರ್ಬ್ಸ್ ಪ್ರಕಾರ ಅರಿಸ್ಟಾ ಸಂಸ್ಥೆಯ ಶೇ.5 ರಷ್ಟು ಷೇರುಗಳನ್ನು ಉಲ್ಲಳ್ ಹೊಂದಿದ್ದಾರೆ. ಇನ್ನು ಪತಿಯೊಂದಿಗೆ ಐಟಿ ಕನ್ಸಟಿಂಘ್ ಹಾಗೂ ಹೊರಗುತ್ತಿಗೆ ಸಂಸ್ಥೆ ಸಿಂಟೆಲ್ ನ್ನು ಪ್ರಾರಂಭಿಸಿದ್ದ ಸೇಥಿ  ಅವರ ಸಂಸ್ಥೆ 2017 ರ ವೇಳೆಗೆ 924 ಮಿಲಿಯನ್ ಡಾಲರ್ ನಷ್ಟು ಆದಾಯ ಹೊಂದಿದ್ದು 23,000 ಉದ್ಯೋಗಿಗಳ ಪೈಕಿ ಶೇ.80 ರಷ್ಟು ಜನರು ಭಾರತೀಯರೇ ಆಗಿದ್ದಾರೆ. 
ಒಟ್ಟಾರೆ 60 ಮಹಿಳೆಯರ ಆಸ್ತಿಯ ಮೌಲ್ಯ 71 ಬಿಲಿಯನ್ ಡಾಲರ್ ಆಗಿದ್ದು 2017 ಕ್ಕಿಂತ ಶೇ.15 ರಷ್ಟು ಹೆಚ್ಚಿದೆ ಎಂದು ಫೋರ್ಬ್ಸ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com