ಪಾಕಿಸ್ತಾನದಲ್ಲಿ ಜು. 25 ಮರೆಯಲಾಗದ ದಿನವನ್ನಾಗಿ ಮಾಡಿ : ಮತದಾರರಿಗೆ ಷರೀಫ್ ಕರೆ
ಪಾಕಿಸ್ತಾನ: ಪ್ರಸ್ತುತ ರಾವಲ್ಪಿಂಡಿಯ ಅಡಿಯಾ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಜುಲೈ 25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಬಂದು ತಮ್ಮ ಮತ ಚಲಾಯಿಸುವಂತೆ ಭಾವುಕರಾಗಿ ಮನವಿ ಮಾಡಿದ್ದಾರೆ.
ಲಂಡನ್ ನಲ್ಲಿ ರೇಕಾರ್ಡ್ ಆಗಿರುವ ಆಡಿಯೋ ಸಂದೇಶವನ್ನು ಇಂದು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ. ಜುಲೈ 25 ದಿನವನ್ನು ಮರೆಯಲಾಗದಂತಹ ದಿನವನ್ನಾಗಿ ಮಾಡುವಂತೆ ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ಅಮೂಲ್ಯ ಮತಕ್ಕೆ ಗೌರವ ನೀಡಿ. ರಾಷ್ಟ್ರಧ್ವಜ ತೆಗೆದುಕೊಂಡು ಹೋಗಿ ಮತ ಚಲಾಯಿಸಿ,ಈ ಸಂದೇಶವನ್ನು ಬೀದಿ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಮುಟ್ಟಿಸಿ. ಯಾರೂ ಮತದಾನಕ್ಕೆ ಗೌರವ ನೀಡುವುದಿಲ್ಲವೂ ಅವರು ಅವರ ತಲೆಗೆ ಅವರೇ ಕುಣಿಕೆ ಹಾಕಿಕೊಡಂತೆ ಆಗಲಿದೆ ಎಂದು ಷರೀಫ್ ಹೇಳಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತ್ನಿ ಕುಲ್ ಸೊಮ್ ನವಾಜ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿ ಎಂದು ಅವರು ದೇಶದ ಜನರನ್ನು ಒತ್ತಾಯಿಸಿದ್ದಾರೆ. ಪಾಕಿಸ್ತಾನ ಹಾಗೂ ಅಲ್ಲಿನ ಜನರೊಂದಿಗೆ ಬಾಂಧವ್ಯ ಗಟ್ಟಿಯಾಗಿದ್ದು, ಎಂದಿಗೂ ಮುರಿಯುವುದಿಲಲ ಎಂದು ಅವರು ವಿಶ್ವಾಸದ ಮಾತುಗಳ್ನಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ