ಜಾದವ್ ಪ್ರಕರಣದಲ್ಲಿ ಭಾರತದ ಆರೋಪವನ್ನು ತಿರಸ್ಕರಿಸಿದ ಪಾಕಿಸ್ತಾನ

ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾದವ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಆರೋಪವನ್ನು ಪಾಕಿಸ್ತಾನ ತಿರಸ್ಕರಿಸಿದೆ.
ಕುಲಭೂಷಣ್ ಜಾದವ್
ಕುಲಭೂಷಣ್ ಜಾದವ್

ಇಸ್ಲಾಮಾಬಾದ್ : ಭಾರತದ ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾದವ್ ಅವರ ಪ್ರಕರಣಕ್ಕೆ ಸಂಬಂಧಿಸಿದ   ಪಾಕಿಸ್ತಾನ  ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತನ್ನ ಎರಡನೇ ಪ್ರತಿಹೇಳಿಕೆಯನ್ನು ದಾಖಲಿಸಿದೆ.

ಕಳೆದ ವರ್ಷ ಜಾದವ್ ಅವರನ್ನು ನೋಡಲು ಅವರ ತಾಯಿ ಹಾಗೂ ಪತ್ನಿ   ಹೋಗಿದ್ದಾಗ ಪಾಕಿಸ್ತಾನ ಅನುಚಿತವಾಗಿ ವರ್ತಿಸಿದೆ ಎಂಬ ಭಾರತದ ಆರೋಪವನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಇತ್ತೀಚಿನ ಸುತ್ತಿನ ವಿಚಾರಣೆ ಬಳಿಕ ಈ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಮುಂದಿನ ವರ್ಷದಲ್ಲಿ ವಿಚಾರಣೆ ನಿಗದಿಗೊಳಿಸುವ ಸಾಧ್ಯತೆ ಇದೆ.

ಏ. 17 ರಂದು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಎದುರು ತನ್ನ ಅಭಿಪ್ರಾಯ ಮಂಡಿಸಿತ್ತು. ಜಾದವ್ ಸಾಮಾನ್ಯ ವ್ಯಕ್ತಿಯಲ್ಲ. ವಿಯನ್ನಾ  ಒಪ್ಪಂದದ ವ್ಯಾಪ್ತಿಯನ್ನು ಮೀರಿಲ್ಲ ಎಂದು ಹೇಳಿಕೆ ನೀಡಿತ್ತು.

ಕಳೆದ ವರ್ಷದ ಮೇ 8 ರ ಬಳಿಕ ಇದೇ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ತನ್ನ ಹೇಳಿಕೆ ದಾಖಲಿಸಿದ ಭಾರತ, ವಿಯನ್ನಾ ಒಪ್ಪಂದಕ್ಕೆ ಸಂಬಂಧಿಸಿದ 1963ಯ ವಿನಾಯಿತಿಯನ್ನು ಉಲ್ಲಂಘಿಸಿಲ್ಲ ಎಂದು ಭಾರತ ಹೇಳಿಕೆ ನೀಡಿತ್ತು.

ಮೇ. 18 ರಂದು ಅಂತಾರಾಷ್ಟ್ರೀಯ ನ್ಯಾಯಾಲಯ  ಪಾಕಿಸ್ತಾನ ಯಾವುದೇ ಕಾರಣಕ್ಕೂ ಜಾದವ್ ಗೆ  ಮರಣದಂಡನೆಯಂತಹ ಶಿಕ್ಷೆಯನ್ನು  ಪ್ರಕಟಿಸಬಾರದೆಂದು  ತನ್ನ ಮಧ್ಯಂತರ ತೀರ್ಪಿನಲ್ಲಿ ಪ್ರಕಟಿಸಿತ್ತು.
ಈ ಆದೇಶದಂತೆ ಭಾರತ ಕಳೆದ ವರ್ಷ ಸೆಪ್ಟೆಂಬರ್ 13 ರಂದು ಜಾದವ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಲಿಖಿತ ಹೇಳಿಕೆ ನೀಡಿತ್ತು. ನಂತರ ಡಿಸೆಂಬರ್ ನಲ್ಲಿ ಪಾಕಿಸ್ತಾನ ಪ್ರತಿ ಹೇಳಿಕೆ ದಾಖಲಿಸಿತ್ತು.
 ಭಾರತದ ಗುಪ್ತಚರ ಸಂಸ್ಥೆ ರಾಗೆ ಬೇಹುಗಾರಿಕೆ ಹಾಗೂ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವಿಕೆ ಆರೋಪದ ಮೇರೆಗೆ  ಬಲೂಚಿಸ್ತಾನದಲ್ಲಿ ಜಾದವ್ ಅವರನ್ನು ಪಾಕಿಸ್ತಾನ ಬಂಧಿಸಿತ್ತು.  ಮಾಜಿ ನೌಕಾಯಾನದ ಅಧಿಕಾರಿಯನ್ನು ಇರಾನ್ ನಿಂದ ಪಾಕಿಸ್ತಾನ ಆರೋಪಿಸಿದೆ ಎಂದು ಭಾರತ ಆರೋಪಿಸುತ್ತಾ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com