ಡೇವಿಡ್ ಹೆಡ್ಲಿ ಚಿಕಾಗೋ ಅಥವಾ ಆಸ್ಪತ್ರೆಯಲ್ಲಿಲ್ಲ: ಹಂತಕನ ಪರ ವಕೀಲರಿಂದ ಸ್ಪಷ್ಟನೆ

26/11 ಮುಂಬೈ ದಾಳಿಯ ಪ್ರಮುಖ ಆರೊಪಿ ಡೇವಿಡ್ ಕೊಲೆಮನ್ ಹೆಡ್ಲಿ ಚಿಕಾಗೋದಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ ಇಲ್ಲ ಎಂದು ಅವನ ಪರ ವಕೀಲರು ಹೇಳಿದರು.
ಡೇವಿಡ್ ಕೊಲೆಮನ್ ಹೆಡ್ಲಿ
ಡೇವಿಡ್ ಕೊಲೆಮನ್ ಹೆಡ್ಲಿ
ವಾಷಿಂಗ್ಟನ್: 26/11 ಮುಂಬೈ ದಾಳಿಯ ಪ್ರಮುಖ ಆರೊಪಿ  ಡೇವಿಡ್ ಕೊಲೆಮನ್ ಹೆಡ್ಲಿ ಚಿಕಾಗೋದಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ ಇಲ್ಲ ಎಂದು ಅವನ ಪರ ವಕೀಲರು ಹೇಳಿದರು.

2008ರ ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿದ್ದ ಹೆಡ್ಲಿ ಮೇಲೆ ಸಹಖೈದಿಗಳು ಜೈಲಿನಲ್ಲೇ ನಡೆಸಿದ ಹಲ್ಲೆಯಿಂದ ಚಿಕಾಗೋ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾಗಿ ಮಾದ್ಯಮಗಳಲ್ಲಿ ವರದಿಯಾಗಿತ್ತು.

"ನಾನು ಅವನೆಲ್ಲಿದ್ದಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಆದರೆ ಅವನು ಚಿಕಾಗೋದಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ ಇಲ್ಲ" ಹೆಡ್ಲಿಯ ವಕೀಲ ಜಾನ್ ಥೀಸ್ ಪಿಟಿಐಗೆ ತಿಳಿಸಿದ್ದಾರೆ.

ಜುಲೈ 8 ರಂದು ಚಿಕಾಗೊ ಜೈಲಿನಲ್ಲಿ ಇಬ್ಬರುಸಹಖೈದಿಗಳು ಹೆಡ್ಲಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.ಅಂದಿನಿಂದ ಆತ ಆಸ್ಪತ್ರೆಯತೀವ್ರ ನಿಗಾ ಘಟಕದಲ್ಲಿದ್ದ ಎನ್ನಲಾಗಿತ್ತು.

"ನಾನು ಹೆಡ್ಲಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ, ಭಾರತೀಯ ಮಾದ್ಯಮಗಳ ವರದಿಗೆ ಯಾವ ಆಧಾರವಿಲ್ಲ" ಥೀಸ್ ಹೇಳಿದ್ದಾರೆ.

ಮುಂಬೈಯ ಮೇಲೆ 2008 ರ ಭಯೋತ್ಪಾದಕ ದಾಳಿಯಲ್ಲಿ 160 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.ಇದರ ಪ್ರಮುಖ ಆರೋಪಿಯಾಗಿದ್ದ ಹೆಡ್ಲಿಗೆ ಯುಎಸ್ ನ್ಯಾಯಾಲಯವು 35 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಹೆಡ್ಲಿ ಐಸಿಯುದಲ್ಲಿದ್ದಾನೆ ಎನ್ನುವ ವರದಿಯನ್ನು ಅಮೆರಿಕಾ ಸರ್ಕಾರ ಸೋಮವಾರವೇ ನಿರಾಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com