ಪಾಕಿಸ್ತಾನ ಚುನಾವಣೆ ಅಧಿಕೃತ ಫಲಿತಾಂಶ: ಇಮ್ರಾನ್ ಖಾನ್ ಸಾರಥ್ಯದ ಪಿಟಿಐ ಅತಿದೊಡ್ಡ ಪಕ್ಷ, 116 ಸೀಟು

ಪಾಕಿಸ್ತಾನದ ಸಾವ್ರರ್ತಿಕ ಚುನಾವಣೆಯ ಅಧಿಕೃತ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಸ್ಪರ್ಧಿಸಿದ್ದ 270 ಕ್ಷೇತ್ರಗಳ ಪೈಕಿ 116 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಸಾರಥ್ಯದ ತೆಹ್ರಿಕ್ ಇ- ಇನ್ಸಾಪ್ ಪಕ್ಷ ಗೆಲುವು ಸಾಧಿಸುವುದರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ .
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್ : ಪಾಕಿಸ್ತಾನದ ಸಾವ್ರರ್ತಿಕ ಚುನಾವಣೆಯ ಅಧಿಕೃತ ಫಲಿತಾಂಶವನ್ನು  ಚುನಾವಣಾ ಆಯೋಗ ಪ್ರಕಟಿಸಿದ್ದು,  ಸ್ಪರ್ಧಿಸಿದ್ದ 270 ಕ್ಷೇತ್ರಗಳ ಪೈಕಿ 116 ಸ್ಥಾನಗಳಲ್ಲಿ ಇಮ್ರಾನ್ ಖಾನ್ ಸಾರಥ್ಯದ  ತೆಹ್ರಿಕ್  ಇ- ಇನ್ಸಾಪ್ ಪಕ್ಷ ಗೆಲುವು ಸಾಧಿಸುವುದರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ .

ಜುಲೈ 25 ರಂದು ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ  ಎಂದು ಸೋತ ಪಕ್ಷಗಳ ಮುಖಂಡರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಅಧಿಕೃತ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗಿತ್ತು.

ಜೈಲಿನಲ್ಲಿರುವ ಮಾಜಿ ಪ್ರಧಾನಿ ನವಾಜ್ ಷರೀಪ್ ಅವರ ಪಾಕಿಸ್ತಾನ್ ಮುಸ್ಲಿ ಲೀಗ್ ನವಾಜ್ ( ಪಿಎಂಎಲ್ -ಎನ್ ಪಕ್ಷ 64, ಮತ್ತು ಮಾಜಿ ಅಧ್ಯಕ್ಷ ಅಸಿಪ್ ಆಲಿ ಜರ್ದಾರಿ ಅವರ ಪಿಪಿಪಿ 43 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ ಎಂದು ಪಾಕಿಸ್ತಾನ ಚುನಾವಣಾ ಆಯೋಗ ತಿಳಿಸಿದೆ.

ಎಂಎಂಎಪಿ  13 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
13 ಸ್ವತಂತ್ರ ಅಭ್ಯರ್ಥಿಗಳು ಕೂಡಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.  ಸರ್ಕಾರ ರಚನೆಯಲ್ಲಿ ಇವರು ಪಿಐಟಿ ಪಕ್ಷದೊಂದಿಗೆ ಪ್ರಮುಖವಾದ ಪಾತ್ರ ವಹಿಸಲಿದ್ದಾರೆ.

ಕರಾಚಿ ಮೂಲಕದ ಎಂಕ್ಯೂಎಂಪಿ  ಆರು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಪ್ರತಿಯೊಂದು ಪಕ್ಷವು ಗಳಿಸಿದ ಒಟ್ಟಾರೇ ಮತಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com