ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿಗೆ 25 ವರ್ಷ ಜೈಲು

ಡೇತಿಂಗ್ ವೆಬ್ ಸೈಟಿನಲ್ಲಿ ಪರಿಚಯವಾದ ಓರ್ವ ಮಹಿಳೆ ಜತೆ ಅಸಭ್ಯವಾಗಿ ವರ್ತಿಸುತ್ತಿದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾದ ಭಾರತೀಯ ಮೂಲದ......
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಡೇತಿಂಗ್ ವೆಬ್ ಸೈಟಿನಲ್ಲಿ ಪರಿಚಯವಾದ ಓರ್ವ ಮಹಿಳೆ ಜತೆ ಅಸಭ್ಯವಾಗಿ ವರ್ತಿಸುತ್ತಿದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾದ ಭಾರತೀಯ ಮೂಲದ ಉದ್ಯಮಿಯೊಬ್ಬನಿಗೆ 25 ವರ್ಷ ಜೈಲು ಶಿಕ್ಷೆ ಜಾರಿಯಾಗಿದೆ ಎಂದು ಮಾದ್ಯಮ ವರ್ದಿ ತಿಳಿಸಿದೆ.
ಅಮೆರಿಕಾದ ಉತ್ತರ ಕೆರೊಲಿನಾದಲ್ಲಿರುವ ಸಂಜಯ್ ತ್ರಿಪಾಠಿ ಲೈಂಗಿಕ ಕಿರುಕುಳ ಆರೋಪದಡಿ ಶಿಕ್ಷೆಗೆ ಗುರಿಯಾಗಿದ್ದು ಜೂನ್ 15, 2016 ರಂದು ಟೈಮ್ಸ್ ಸ್ಕ್ವೇರ್ ನಲ್ಲಿರುವ ಹೋಟೆಲ್ ನಲ್ಲಿ 38 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದಿ ನ್ಯೂಯಾರ್ಕ್  ಡೈಲಿ ನ್ಯೂಸ್ ವರದಿ ಮಾಡಿದೆ. ಮ್ಯಾನ್ ಹಟನ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ತ್ರಿಪಾಠಿಗೆ ಜಾಮೀನು ರಹಿತ ಶಿಕ್ಷ್ಗೆ ವಿಡಿಸಲಾಗಿದೆ.
ವಯೋವೃದ್ದ ಪುರುಷರಿಗೆ ಯುವ ಮಹಿಳೆಯರನ್ನು ಪರಿಚಯಿಸಿ, ಡೇಟಿಂಗ್ ಗೆ ಅವಕಾಶ ಕಲ್ಪಿಸುವ ಒಂದು ವೆಬ್ ಸೈಟ್ ನಲ್ಲಿ ತನ್ನನ್ನು ತಾನು ಮಿಲೇನಿಯರ್ ಎಂದು ಪರಿಚಯಿಸಿಕೊಂಡಿದ್ದ ತ್ರಿಪಾಠಿ ಅಲ್ಲೇ ತಾನು ಸಂತ್ರಸ್ತ ಮಹಿಳೆಯ ಪರಿಚಯ ಹೊಂದಿದ್ದ . ಸಂತ್ರಸ್ತಳನ್ನು ಹೋಟೆಲ್ ಬಾರ್ ನಲ್ಲಿ ಭೇಟಿಯಾದ ತ್ರಿಪಾಠಿ ಆಕೆಗೆ ಉಡುಗೊರೆ ನೀಡುವುದಾಗಿ ಭರವಸೆ ನೀಡಿ ಆಕೆಯ ಕೋಣೆ ಪ್ರವೇಶಿಸುತ್ತಾನೆ. ಆಕೆ ಮತ್ತು ತ್ರಿಪಾಠಿ ಒಮ್ಮತದ ಲೈಂಗಿಕತೆಗೆ ಒಪ್ಪಿದ್ದರು, ಆಕೆ ಅದಕ್ಕಾಗಿ ಹಣ ಸ್ವೀಕರಿಸಿದ್ದಳೆಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ತ್ರಿಪೊಆಠಿ ಕೈಗೆ ಸಿಕ್ಕ ಆಕೆಯ ಮೇಲೆ ಆತ ರಾಕ್ಷಸೀಯ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದು ಆಕೆ ಬಾತ್ ರೂಮ್ ನಲ್ಲಿ ಕನ್ನಡಿಯ ಮುಂದೆ ನಿಂತಾಗ ತಾನೇ ತನ್ನನ್ನು ಗುರುತಿಸಲಾಗದಷ್ಟು ಗಾಯಗಳು ಹಾಗೂ ರಕ್ತದ ಕಲೆಗಳು ಮುಖ, ದೇಹದ ತುಂಬೆಲ್ಲಾ ಇತ್ತು. ಹೀಗಾಗಿ ಹೆದರಿದ ಆಕೆ ನ್ಯೂಯಾರ್ಕ್ ಪೋಲೀಸರಿಗೆ ಆಕೆ ತ್ರಿಪಾಠಿ ತನ್ನನ್ನು ಕೊಲ್ಲಲು ಪ್ರಯತ್ನಿದ್ದಾಗಿ ದೂರಿತ್ತಳು. ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com