ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಪರ್ವೇಜ್ ಮುಷರಫ್ ಸ್ಪರ್ಧೆ ಸಾಧ್ಯತೆ

ಪಾಕಿಸ್ತಾನ ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ ನಂತರ ಪಾಕ್ ಮಾಜಿ ಸರ್ವಾಧಿಕಾರಿ ಪರ್ವೇಜ್....
ಪರ್ವೇಜ್ ಮುಷರಫ್
ಪರ್ವೇಜ್ ಮುಷರಫ್
ಇಸ್ಲಾಮಾಬಾದ್: ಪಾಕಿಸ್ತಾನ ಸುಪ್ರೀಂ ಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ ನಂತರ ಪಾಕ್ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರು ಜುಲೈ 25ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಅವರ ಪಕ್ಷ ತಿಳಿಸಿದೆ.
2013ರಲ್ಲಿ ಹೈಕೋರ್ಟ್ ಮುಷರಫ್ ಅವರಿಗೆ ಜೀವಾವಧಿ ನಿಷೇಧ ಹೇರಿದ್ದು, ಇದನ್ನು ಪ್ರಶ್ನಿಸಿ ಪಾಕ್ ಮಾಜಿ ಅಧ್ಯಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳು, 74 ವರ್ಷದ ಮುಷರಫ್ ನಾಮಪತ್ರ ಸಲ್ಲಿಸಬಹುದು ಎಂದು ಹೇಳಿದೆ.
ಮುಷರಫ್ ಅವರು ಖೈಬರ್ ಪ್ರಾಂತ್ಯದ ಚಿತ್ರಾಲ್ ಉತ್ತರ ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಅವರ ಆಲ್ ಪಾಕಿಸ್ತಾನ ಮುಸ್ಲಿಂ ಲೀಗ್(ಎಪಿಎಂಎಲ್) ಹೇಳಿದೆ.
ಮುಷರಫ್ ಅವರು ತಮ್ಮ ತವರು ಜಿಲ್ಲೆ ಕರಾಚಿಯಲ್ಲಿ ಸ್ಪರ್ಧಿಸುತ್ತಾರೆ ಎಂದು ಸಹ ಮಾಧ್ಯಮಗಳು ವರದಿ ಮಾಡಿವೆ.
ಫರ್ವೇಜ್ ಮುಷರಫ್ ಅವರು ಚುನಾವಣೆಗೂ ಮುನ್ನವೇ ದೇಶಕ್ಕೆ ಮರುಳಲಿದ್ದಾರೆ. ಆದರೆ ನಿರ್ಧಿಷ್ಟ ದಿನಾಂಕ ನಿಗದಿಯಾಗಿಲ್ಲ. ನಮ್ಮ ಪಕ್ಷ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಎಪಿಎಂಎಲ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಜದ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com