ವಲಸೆ ನೀತಿಯಲ್ಲಿ ಬ್ರಿಟನ್ ಹಲವು ಬದಲಾವಣೆಗೆಳನ್ನು ಮಾಡಲು ಮುಂದಾಗಿದ್ದು, ಈ ಸಂಬಂಧ ಸಂಸತ್ ನಲ್ಲಿ ಹೊಸ ನೀತಿಯನ್ನು ಮಂಡಿಸಲಾಗಿದೆ. ಸುಮಾರು 25 ರಾಷ್ಟ್ರಗಳಿಂದ ಬ್ರಿಟನ್ ಗೆ ಬರುವ ವಿದ್ಯಾರ್ಥಿಗಳಿಗಾಗಿ ಟೈರ್-4 ವಿಭಾಗದ ವೀಸಾ ನಿಯಮಗಳನ್ನು ಸಡಿಸಿಲುವುದಾಗಿ ಬ್ರಿಟನ್ ನ ಗೃಹ ಇಲಾಖೆ ತಿಳಿಸಿತ್ತು. ಅಮೆರಿಕ, ಕೆನಡಾ ಹಾಗೂ ನ್ಯೂಜಿಲ್ಯಾಂಡ್ ಸೇರಿದಂತೆ 25 ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಬ್ರಿಟನ್ ವೀಸಾ ದೊರೆಯಲಿದ್ದು, ಭಾರತವನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.