ಜಗತ್ತಿನ ಅತೀ ಕಿರಿಯ ಯೋಗ ಟೀಚರ್, ತಿಂಗಳಿಗೆ 10 ಲಕ್ಷ ರು. ಸಂಪಾದನೆ!

ಯೋಗದ ಮಹತ್ವ ಇದೀಗ ಜಗತ್ತಿನಾದ್ಯಂತ ವೈರಸ್ ನಂತೆ ಪಸರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಶತಪ್ರಯತ್ನದ ಫಲವಾಗಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ...
ಸುನ್ ಚುವಾಂಗ್
ಸುನ್ ಚುವಾಂಗ್
ಬೀಜಿಂಗ್: ಯೋಗದ ಮಹತ್ವ ಇದೀಗ ಜಗತ್ತಿನಾದ್ಯಂತ ವೈರಸ್ ನಂತೆ ಪಸರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಶತಪ್ರಯತ್ನದ ಫಲವಾಗಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಮಾಡಿದ ನಂತರ ಅದರ ಪಸರಿಸುವಿಕೆ ಮತ್ತಷ್ಟು ಜಾಸ್ತಿಯಾಗಿದೆ. 
ಇನ್ನು ಚೀನಾದಲ್ಲಿ ಅತೀ ಚಿಕ್ಕ ವಯಸ್ಸಿನ ಯೋಗ ಗುರು ಇದ್ದಾನೆ. ಆತನ ವಯಸ್ಸು 7 ವರ್ಷ ಅದಾಗಲೇ ಯೋಗವನ್ನು ಮೈಗೂಡಿಸಿಕೊಂಡು ಯೋಗು ಗುರು ಆಗಿದ್ದಾರೆ. 
ಈ ಯೋಗ ಗುರುವಿನ ಹೆಸರು ಸುನ್ ಚುವಾಂಗ್ ಈತ ಪುಟ್ಟ ಮಕ್ಕಳಿಗೆ ಪ್ರಾಚೀನ ಭಾರತದ ಯೋಗದ ತರಬೇತಿ ನೀಡುತ್ತಾನೆ. ಈ ಮೂಲಕ ತಿಂಗಳಿಗೆ 16 ಸಾವಿರ ಡಾಲರ್(10.90 ಲಕ್ಷ ರು.) ಸಂಪಾದಿಸುತ್ತಿದ್ದಾನೆ. ಇನ್ನು ಚೀನಾದ ಅತ್ಯಂತ ಕಿರಿಯ ಶ್ರೀಮಂತ ವ್ಯಕ್ತಿಯಾಗಿದ್ದಾನೆ. 
ಚೀನಾದಲ್ಲಿ ಈ ಬಾಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾನೆ. ಈ ವರ್ಷದ ಆರಂಭದಿಂದಲೂ ಸುನ್ ಕುರಿತಾದ ಲೇಖನಗಳು ಬರುತ್ತಿವೆ. ಚೀನಾದ ಪೂರ್ವ ಪ್ರಾಂತ್ಯದ ಝೋಜಿಯಾಂಗ್ ನ ನಿವಾಸಿಯಾಗಿರುವ ಸುನ್, ಪ್ರಮಾಣ ಪತ್ರ ಪಡೆದ ಜಗತ್ತಿನ ಅತ್ಯಂತ ಕಿರಿಯ ಯೋಗ ಟೀಚರ್ ಆಗಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com