ಅಮೆರಿಕಾ: ಟ್ರಂಪ್ ವಲಸೆ ನಿಷೇಧ ಕಾನೂನನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಮುಸ್ಲಿಮ್ ಬಾಹುಳ್ಯವಿರುವ ಕೆಲವು ರಾಷ್ಟ್ರಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಪ್ರವಾಸ ನಿಷೇಧ ತೀರ್ಮಾನವನ್ನು ಅಮೆರಿಕಾ ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ಮುಸ್ಲಿಮ್ ಬಾಹುಳ್ಯವಿರುವ ಕೆಲವು ರಾಷ್ಟ್ರಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಪ್ರವಾಸ ನಿಷೇಧ ತೀರ್ಮಾನವನ್ನು ಅಮೆರಿಕಾ ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿ ಹಿಡಿದಿದೆ.
ಟ್ರಂಪ್ ಆಡಳಿತ ನೀತಿಯ ಮೇಲಿನ ನ್ಯಾಯಾಲಯದ ಮೊದಲ ಮಹತ್ವಪೂರ್ಣವಾದ ತೀರ್ಮಾನ ಇದೆಂದು ಪರಿಗಣಿಸಲ್ಪಡುತ್ತದೆ.
ಮುಖ್ಯ ನ್ಯಾಯಮೂರ್ತಿ  ಜಾನ್ ರಾಬರ್ಟ್ಸ್ ಅವರನ್ನೊಳಗೊಂಡಿದ್ದ ಪೀಠ ಟ್ರಂಪ್ ಪ್ರವಾಸ ನಿರ್ಬಂಧ ಆದೇಶವನ್ನು ಎತ್ತಿ ಹಿಡಿದಿದ್ದು ಈ ನಿಷೇಧ ಕ್ರಮ ಧಾರ್ಮಿಕ ಕಾರಣಗಳಿಂದ ಪ್ರೇರಿತವಾಗಿದೆ ಎನ್ನುವ ವಾದವನ್ನು ತಳ್ಳಿ ಹಾಕಿದೆ.
ವಿಶ್ವದಾದ್ಯಂತದ ಬಹು ಸಂಸ್ಥೆಗಳ ಸಮೀಕ್ಷೆಯನ್ನು  ಆಧರಿಸಿ ಹೇಳುವುದಾದರೆ ಅದ್ಯಕ್ಷರು ನ್ಯಾಯವಾದದ್ದನ್ನೇ ಮಾಡಿದ್ದಾರೆ. ಇಂತಹಾ ರಾಷ್ಟಗಳ ನಾಗರಿಕರು ಅಮೆರಿಕಾ ಪ್ರವೇಶ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಏಪ್ರಿಲ್ ಏಪ್ರಿಲ್ 25 ರಂದು ಈ ಸಂಬಂಧ ವಾದಗಳನ್ನು ಆಲಿಸಿದ್ದ ನ್ಯಾಯಾಲಯ ಟ್ರಂಪ್ ನೀತಿ ಹಾಗೂ ಸಂಪ್ರದಾಯವಾದಿಗಳ ವಾದ ಪ್ರತಿವಾದ ಕೇಳಿದ್ದು ಈ ತೀರ್ಪು ಪ್ರಕಟಿಸಿದೆ.
ಕಳೆದ ಸಪ್ಟೆಂಬರ್ ನಲ್ಲಿ ಡೊನಾಲ್ಡ್ ಟ್ರಂಪ್  ಇರಾನ್, ಲಿಬಿಯಾ, ಸೋಮಾಲಿಯಾ, ಸಿರಿಯಾ ಮತ್ತು ಯೆಮೆನ್ ದೇಶಗಳ ಜನರು ಅಮೆರಿಕಾಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದಕ್ಕೆ ನಿಷೇಧ ಹೇರಿದ್ದರು. ಉತ್ತರ ಕೊರಿಯಾ ಮತ್ತು ವೆನೆಜುವೆಲಾ ರಾಷ್ಟ್ರಗಳಿಗೆ ಟ್ರಂಪ್ ವಲಸೆ ನಿರ್ಬಂಧ ಕಾನೂನು ಅಲ್ಪ ಪ್ರಮಾಣದಲ್ಲಿ ನಿರ್ಬಂಧಗಳನ್ನು ವಿಧಿಸಿತ್ತು.
ನ್ಯಾಯಾಲಯದ ತೀರ್ಪು ಬಂದ ನಂತರ ಟ್ವೀಟ್ ಮಾಡಿರುವ ಅಧ್ಯಕ್ಷ ಟ್ರಂಪ್ "ಸುಪ್ರೀಂ ಕೋರ್ಟ್ ಟ್ರಂಪ್ ವಲಸೆ ನೀತಿಯನ್ನು ಎತ್ತಿ ಹಿಡಿದಿಎ ವಾವ್!’ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com